ಕಾರ್ಯಕ್ರಮ

ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ

ಕುಶಾಲನಗರ, ಆ 19: ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇದರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮೂರನೇ ವರ್ಷದ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವನ್ನು ನಂಜರಾಯಪಟ್ಟಣ ನೂರುಲ್ ಇಸ್ಲಾಂ ಮದರಸದಲ್ಲಿ ಆಯೋಜಿಸಲಾಯಿತು.

ನಂಜರಾಯಪಟ್ಟಣ ಮಹಲ್ ಖತೀಬರಾದ ಮಹಮ್ಮದ್ ಸಹದಿ ಉಸ್ತಾದ್ ರವರು ಪ್ರಾರ್ಥನೆ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿಎಲ್ ವಿಶ್ವ ರವರು ಮಾತನಾಡಿ ನಂಜರಾಯಪಟ್ಟಣ ಮುಸ್ಲಿಂ ಜಮಾತ್ ವತಿಯಿಂದ ಇಂತಹ ಸಮಾಜಮುಖಿ ಕಾರ್ಯ ಮಾಡುವುದರಿಂದ ಗ್ರಾಮದಲ್ಲಿ ಸೌಹಾರ್ದತೆ ಹೆಚ್ಚಲು ಅನುಕೂಲವಾಗುತ್ತದೆ ಇಂತಹ ಕಾರ್ಯಗಳಿಗೆ ಗ್ರಾಮ ಪಂಚಾಯಿತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಹೇಳಿದರು. ರಕ್ತ ನಿಧಿ ಕೇಂದ್ರದ ಡಾಕ್ಟರ್ ಕರುಂಬಯ್ಯ ಮಾತನಾಡಿ ಇಂತಹ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ರಕ್ತದಾನ ಶಿಬಿರ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಬೇಕಾಗಿದೆ ಮತ್ತು ರಕ್ತದಾನದ ಮಹತ್ವವನ್ನು ಎಲ್ಲರಿಗೂ ತಿಳಿಸಬೇಕಾಗುತ್ತದೆ ಹಾಗೂ ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿಯ ಇಂತಹ ಸಾಮಾಜಿಕ ಕಾರ್ಯಕ್ರಮ ನಡೆಸುವುದರ ಬಗ್ಗೆ ಅಭಿನಂದನೆ ವ್ಯಕ್ತಪಡಿಸಿದರು. ಜಮಾತಿನ ಧರ್ಮ ಗುರುಗಳಾದ ಮಹಮ್ಮದ್ ಸ ಆದಿ ಉಸ್ತಾದ್ ಮಾತನಾಡಿ ಯಾವುದೇ ಜಾತಿ ಮತ್ತೆ ಭೇದವಿಲ್ಲದೆ ರಕ್ತದಾನ ಮಾಡಬೇಕು ರಕ್ತದಾನ ಮಾಡುವವರನ್ನು ಪ್ರೋತ್ಸಾಹಿಸಬೇಕು ಎಂದರು. ರಕ್ತದಾನದ ಮಹತ್ವವನ್ನು ತಿಳಿಸಿದ ನೌಷದ್ ರವರು ಎಲ್ಲರನ್ನು ಸ್ವಾಗತಿಸಿದರು. ರಕ್ತದಾನ ಮಾಡಿದ 50ಕ್ಕೂ ಅಧಿಕ ಮಂದಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಜಮಾತ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯವರಾದ ಮುಸ್ತಫ ಬಿ ಎಸ್ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಧ ಸಿಎಲ್ ವಿಶ್ವ , ಡಾಕ್ಟರ್ ಕರುಂ ಬಯ್ಯ ,ನಂಜರಾಯಪಟ್ಟಣ ಆಸ್ಪತ್ರೆಯ ನರ್ಸ್ ಸುಮಿತ್ರ , ನಂಜರಾಯಪಟ್ಟಣ ಮುಸ್ಲಿಂ ಜಮತ್ತಿನ ಅಧ್ಯಕ್ಷರಾದ ಎಂ ಈ ಅಬ್ಬಾಸ್ ,ಉಪಾಧ್ಯಕ್ಷರಾದ ಅನೀಶ್ ಕೆ ಎ , ಕಾರ್ಯದರ್ಶಿಯವರಾದ ಮುಸ್ತಫ ,ಸಹ ಕಾರ್ಯದರ್ಶಿ ರಿಯಾಜ್ ಕೆಬಿ ,ಸದಸ್ಯರಾದ ಅಬ್ದುಲ್ ರೆಹಮಾನ್ ಬಿ ಎಸ್, ಹನೀಫ್ ಅಶ್ರಫಿ, ಧರ್ಮ ಗುರುಗಳಾದ ಮಹಮ್ಮದ್ ಸಹದಿ ಉಸ್ತಾದ್ ,ಮಹಮ್ಮದ್ ಮದನಿ ಉಸ್ತಾದ್, ಗ್ರಾಮಸ್ಥರಾದ ನಿವೃತ್ತ ಪೊಲೀಸ ಅಧಿಕಾರಿ ಎಪಿ ಸೀತಾರಾಮ್ ,ಮಾಜಿ ಸೈನಿಕರಾದ ಜಲಾಲುದ್ದೀನ್ ಕೆ ಎಸ್ , ಮನೀಶ್, ಮಂಜು, ಹ್ಯಾರಿಸ್, ನೌಶಾದ್ , ಬಶೀರ್, ಇರ್ಷಾದ್, ನೌಫಲ್ ,ಆಶಿಕ್, ಅಸ್ಲಾಂ, ಡಿಪ್ಪಿ, ರಶೀದ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!