ಕಾರ್ಯಕ್ರಮ

ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಊರೋರ್ಮೆ ಸಂತೋಷ ಕೂಟ

ಕುಶಾಲನಗರ, ಜ 07:
ಕುಶಾಲನಗರ ಕೊಡವ ಸಮಾಜದ ಪುತ್ತರಿ ಊರೋರ್ಮೆ ಸಂತೋಷ ಕೂಟ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಡಾ.ಉಳುವಂಗಡ ಕಾವೇರಿ ಉದಯ ಅವರು ಮುಖ್ಯ ಭಾಷಣ ಮಾಡಿ ಹುತ್ತರಿ ಹಬ್ಬದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇಂತಹ ಆಚರಣೆಗಳ‌ ಮೂಲಕ ಹೊಸ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕಾರ್ಯ ವಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ ಮಾತನಾಡಿ, ನಮ್ಮ ಜನಾಂಗದ ಆಚಾರ ವಿಚಾರವನ್ನು ಎಲ್ಲರೂ ಚಾಚುತಪ್ಪದೆ ಪಾಲಿಸಿಕೊಂಡು ಯುವ ಪೀಳಿಗೆಗೆ ಕಲಿಸಿಕೊಡುವ ಕೆಲಸವನ್ನು ನಾವೆಲ್ಲ ಮಾಡಬೇಕು. ಹಾಗಿದ್ದರೆ ಮಾತ್ರ ನಮ್ಮ ಕಲೆ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ನಮ್ಮ ಸಂಖ್ಯಾಬಲ ಕಮ್ಮಿಯಾಗುತ್ತಿರುವುದು ಆತಂಕಕಾರಿ ವಿಚಾರ ಎಂದ ಅವರು, ಇದರ ಬಗ್ಗೆ ಗಮನಹರಿಸಬೇಕಿದೆ.

ಕಟ್ಟೆಮಾಡು ದೇವಸ್ಥಾನದಲ್ಲಿ ನಡೆದ ಘಟನೆ ಖಂಡಿಸಿದ ಅವರು, ನಮ್ಮ ಕುಪ್ಪಸ ಮತ್ತು ಆಚಾರ ವಿಚಾರಕ್ಕೆ ಧಕ್ಕೆ ಬಂದಾಗ ನಾವೆಲ್ಲ ಒಂದಾಗಿ ಖಂಡಿಸಬೇಕು ಎಂದರು.

ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಅಯಿಲಪಂಡ ಸಂಜು ಬೆಳ್ಳಿಯಪ್ಪ, ಖಜಾಂಚಿ ಬೊಳ್ಳಚಂಡ ಸನ್ನಿ ಮುತ್ತಣ್ಣ ಇದ್ದರು.

ಮಕ್ಕಳಿಂದ ನಡೆದ ಕೊಡವ ಹಾಡಿನ ನೃತ್ಯ, ಕೊಡಗಿನ ಕಲೆಯಾದ ಉಮ್ಮತ್ತಾಟ್, ಪರೇಕಳಿ ಗಮನ ಸೆಳೆಯಿತು.

ಉತ್ತಮ ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು. ಹಿರಿಯ ಸದಸ್ಯ ಬಲ್ಲಾರಂಡ ಜಾಲಿ ತಿಮ್ಮಯ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯದರ್ಶಿ ಅಯಿಲಪಂಡ ಸಂಜು ಸ್ವಾಗತಿಸಿದರು, ಸಹ ಕಾರ್ಯದರ್ಶಿ ಮೈಂದಪಂಡ ಜಗದೀಶ್ ವಂದಿಸಿದರು, ನಂದಿನೆರವಂಡ ಅನಿತ ಜಗದೀಶ್, ಚರಮಂದಂಡ ಪ್ರಕಾಶ್ ಪಳಂಗಪ್ಪ, ಅಲ್ಲಾರಂಡ ಹೇಮಾವತಿ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!