ಆರೋಪ

ಸರ್ವೆ ಮುಂದೂಡಿಕೆ: ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆಯ ಎಚ್ಚರಿಕೆ

ಕುಶಾಲನಗರ, ಜ 07: ಕುಶಾಲನಗರ ಹಾರಂಗಿ ಮುಖ್ಯ ರಸ್ತೆಯನ್ನು ಕಾವೇರಿ ನೀರಾವರಿ ನಿಗಮದಿಂದ ನಿರ್ಮಾಣ ಮಾಡಿದ್ದು ಚಿಕ್ಕತ್ತೂರು ಭಾಗದಲ್ಲಿ ವ್ಯಕ್ತಿಯೊಬ್ಬರು ರಸ್ತೆ ಇರುವ ಜಾಗ ನನ್ನದೆಂದು ಸಮಸ್ಯೆ ಉಂಟಾಗಿ ಸುಮಾರು 100 ಮೀಟರ್ ನಷ್ಟು ರಸ್ತೆಯ ಕಾಮಗಾರಿ ಸ್ಥಗಿತವಾಗಿ ಸುಮಾರು ಎರಡು ವರ್ಷಗಳು ಕಳೆದರೂ ರಸ್ತೆಯ ಇರುವ ಜಾಗ ಯಾರದೆಂದು ಗುರುತಿಸಿಲ್ಲ ಒಂದು ವೇಳೆ ರಸ್ತೆ ಜಾಗ ಆ ವ್ಯಕ್ತಿಯದ್ದೇ ಹಾಗಿದ್ದರೆ ಪರಿಹಾರವನ್ನು ಕೊಟ್ಟು ಸಮಸ್ಯೆಯನ್ನ ಬಗೆಹರಿಸಬಹುದಾಗಿತ್ತು ಅಥವಾ ಕಾನೂನು ಕ್ರಮ ಕೈಗೊಳ್ಳಬಹುದಾಗಿತ್ತು ಆದರೆ ಇದು ಯಾವುದನ್ನು ಕೂಡ ಸಂಬಂಧಪಟ್ಟ ಇಲಾಖೆಗಳು ಮಾಡದೆ ಇದ್ದ ಕಾರಣ ಇತ್ತೀಚೆಗೆ ರಸ್ತೆಯ ಅರ್ಧದಷ್ಟು ಜಾಗದಲ್ಲಿ ಮಣ್ಣು ಸುರಿದು ಜೆಸಿಬಿ ಮುಖಾಂತರ ಗುಂಡಿ ತೆಗೆಯಲಾಗಿದೆ.

ಈ ರಸ್ತೆಯನ್ನು ಅವಲಂಬಿಸಿರುವ 8 ಗ್ರಾಮಸ್ಥರಿಗೆ ತೀರ ತೊಂದರೆ ಉಂಟಾಗಿದೆ ಮತ್ತು ದಿನನಿತ್ಯ ಶಾಲೆ ಮಕ್ಕಳ ವಾಹನಗಳಿಗೂ ಆಟೋ ಚಾಲಕರಿಗಳಿಗೂ ತೊಂದರೆ ಉಂಟಾಗಿದೆ. ಈ ಮಾರ್ಗದಲ್ಲಿ ದಿನನಿತ್ಯ ಹಾರಂಗಿ ಬರುವಂತ ಸಾವಿರಾರು ಪ್ರವಾಸಿ ವಾಹನಗಳಿಗೂ ತೊಂದರೆ ಉಂಟಾಗಿದೆ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿದೆ ಎಂದು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್  ಖಂಡಿಸಿದ್ದಾರೆ.

ಇಂದು ದಿನಾಂಕ 07/01/2025 ಮಂಗಳವಾರ ರಸ್ತೆ ಸರ್ವೆ ಮಾಡುವುದಾಗಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ದಿಢೀರನೆ ರಸ್ತೆ ಸರ್ವೆ ಮುಂದೂಡಿರುವುದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ.
ಆದಷ್ಟು ಬೇಗ ತಾಲೂಕು ಆಡಳಿತ ಇತ್ತ ಗಮನಹರಿಸಿ ಸಮಸ್ಯೆಯನ್ನು ಸರಿಪಡಿಸದಿದ್ದರೆ ತಾಲೂಕು ಕಚೇರಿ ಎದುರು ಎಲ್ಲಾ ಗ್ರಾಮಸ್ಥರನ್ನು ಒಗ್ಗೂಡಿಸಿ ವಿನೂತನ ಉಗ್ರ ಪ್ರತಿಭಟನೆ ಮಾಡುವುದಾಗಿ ಭಾಸ್ಕರ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!