ಕ್ರೈಂ

ಗಾಂಜಾ ಮಾರಾಟ: ನಾಲ್ವರ ಬಂಧನ

ಕುಶಾಲನಗರ, ಜ 05: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮೇಕೂರು ಹೊಸ್ಕೇರಿ ಬಸ್ ನಿಲ್ದಾಣ ಹಾಗೂ ಮಾರ್ಕೆಟ್‌ನಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ/ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಮಹೇಶ್‌ಕುಮಾರ್, ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ಶ್ರೀ ರಾಜು.ಪಿ.ಕೆ. ಸಿಪಿಐ, ಮಡಿಕೇರಿ ನಗರ ವೃತ್ತ, ಶ್ರೀ ರಾಘವೇಂದ್ರ, ಪಿಎಸ್‌ಐ, ಸಿದ್ದಾಪುರ ಪೊಲೀಸ್ ತಾಣೆ & ಠಾಣಾ ಸಿಬ್ಬಂದಿಗಳ ತಂಡ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡು ದಿನಾಂಕ: 05-01-2025 ರಂದು ಮೇಕೂರು ಹೊಸೈರಿ ಬಸ್ ನಿಲ್ದಾಣ ಹಾಗೂ ಮಾರ್ಕೆಟ್ ನಲ್ಲಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ/ಸರಬರಾಜು ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಅಸ್ಸಾಂ ರಾಜ್ಯ ಮೂಲದ ಮೆಕೂರು ಹೊಕ್ಕೇರಿ ಗ್ರಾಮದ ನಿವಾಸಿಗಳಾದ 1) ಸೋಫಿಕುಲ್ ಇಸ್ಲಾಂ, 24 ವರ್ಷ, 2) ಇಮ್ಮಿಯಾಜ್ ಆಲಿ, 20 ವರ್ಷ, 3) ರೋಹಿಥಾನ್, 50 ವರ್ಷ, ಮತ್ತು ಕೋಣನ ಕಟ್ಟೆ-ಸುಳುಗೋಡು ಗ್ರಾಮ ನಿವಾಸಿಯಾದ 4) ಯೂಸೂಫ್ ಆಲಿ, 32 ವರ್ಷ ಎಂಬುವವರನ್ನು 2 ಕೆ.ಜಿ 481 ಗ್ರಾಂ ಗಾಂಜಾ ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!