ಕ್ರೈಂ

ರಸಲ್ ಪುರ: ಗೃಹಿಣಿ ವಿಷ ಸೇವನೆ – ಚಿಕಿತ್ಸೆ ಫಲಿಸದೆ ಸಾವು

ಕುಶಾಲನಗರ, ಅ 15 ಗೃಹಿಣಿಯೋರ್ವರು ವಿಷ ಸೇವಿಸಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿಯ ರಸೂಲ್ ಪುರ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಆಮೆಮನೆ ಬಾಲಕೃಷ್ಣ ಎಂಬವರ ಪುತ್ರ ರಾಜೇಶ್ ಎಂಬವರ ಪತ್ನಿ ತೇಜಸ್ವಿನಿ ಎಂಬಾಕೆಯೇ (30) ಮೃತ ದುರ್ದೈವಿ.
ಕಳೆದ ನಾಲ್ಕು ದಿನಗಳ ಹಿಂದೆ ರಸೂಲ್ ಪುರದ ಸ್ವಗೃಹದಲ್ಲಿ ಕೌಟುಂಬಿಕ ಸಂಘರ್ಷದಿಂದ ಬೇಸತ್ತ ತೇಜಸ್ವಿನಿ ವಿಷ ಸೇವಿಸಿದ್ದರು ಎನ್ನಲಾಗಿದ್ದು ಕೂಡಲೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಲ್ಕು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ವಿನಿ ಮೃತಪಟ್ಟರು ಎನ್ನಲಾಗಿದೆ.
ಮೃತ ತೇಜಸ್ವಿನಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ತಡರಾತ್ರಿ ರಸೂಲ್ ಪುರದಲ್ಲಿ ನೆರವೇರಿತು.
ಪ್ರಕರಣದ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೃತ ತೇಜಸ್ವಿನಿಯ ಪತಿ ರಾಜೇಶ್ ಹಾಗೂ ಆಕೆಯ ಅತ್ತೆ ಮತ್ತು ಮಾವ ಸೇರಿದಂತೆ ಮೂವರ ವಿರುದ್ಧ ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳ ಆರೋಪದಡಿ ದೂರು ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!