ಪಿರಿಯಾಪಟ್ಟಣ, ಆ 30: ತಾಲ್ಲೂಕು ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದ್ದು, ಖುಷ್ಕಿ ಬೆಳೆಗಳಾದ ತಂಬಾಕು, ರಾಗಿ, ಅಲಸಂದೆ, ಮುಸುಕಿನ ಜೋಳ, ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ, ಮಳೆಯಾಶ್ರಿತ ಪ್ರದೇಶದಲ್ಲಿನ ಕೃಷಿಯು ಅನಿಶ್ಚಿತತೆಯಿಂದ ಕೂಡಿದ್ದು, ಮಳೆಯಾಗದ ಸಮಯದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ಮಳೆಯಾಶ್ರಿತ ಕೃಷಿಯನ್ನು ಲಾಭದಾಯಕವಾಗಿಸಲು ಘನ ಸರ್ಕಾರವು ಕೃಷಿಭಾಗ್ಯ ಯೋಜನೆ ಪುನರಾಂಭಿಸಿದ್ದು, ಅದರಂತೆ ತಾಲ್ಲೂಕಿಗೆ ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಜ್ಯವಲಯದಲ್ಲಿ ಅನುದಾನ ಬಿಡುಗಡೆಯಾಗಿರುತ್ತದೆ. ಕೃಷಿಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯ ಯೋಜನೆಯಾಗಿದ್ದು, ಪ್ಯಾಕೇಜ್ನಲ್ಲಿ ಕೃಷಿಹೊಂಡ ನಿರ್ಮಾಣಕ್ಕೆ 10/10, 12/12, 15/15, 18/18, 21/21 ವಿನ್ಯಾಸದಲ್ಲಿದ್ದು, ಎಲ್ಲವೂ 3 ಮೀಟರ್ ಆಳ ಹೊಂದಿರುತ್ತದೆ. ಸಾಮಾನ್ಯ ರೈತರಿಗೆ ಶೇ.80 ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪಂಗಂಡದ ರೈತರಿಗೆ ಶೇ.90 ಸಹಾಯಧನ ಸೌಲಭ್ಯವಿರುತ್ತದೆ. ಕೃಷಿ ಹೊಂಡದಲ್ಲಿ ಶೇಖರಣೆಯಾದ ನೀರು ಇಂಗದಂತೆ 420 ಮತ್ತು 250 ನ ಪಾಲಿಥಿನ್ ಹೊದಿಕೆಯ ಸೌಲಭ್ಯವಿದ್ದು, ಸಾಮಾನ್ಯ ರೈತರಿಗೆ ಶೇ.80 ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪಂಗಂಡದ ರೈತರಿಗೆ ಶೇ.90 ಸಹಾಯಧನವಿದೆ. ಮಳೆ ನೀರನ್ನು ಸಂಗ್ರಹಿಸಲು ಬದು ನಿರ್ಮಾಣ, ಜಾನುವಾರುಗಳು ಹಾಗೂ ಜನರ ರಕ್ಷಣೆಗೆ ಕೃಷಿ ಹೊಂಡದ ಸುತ್ತಲೂ ತಂತಿಬೇಲಿ ಕಡ್ಡಾಯವಾಗಿದ್ದು, ಇದಕ್ಕೆ ಸಾಮಾನ್ಯ ರೈತರಿಗೆ ಶೇ.40 ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪಂಗಂಡದ ರೈತರಿಗೆ ಶೇ.50 ಸಹಾಯಧನ, ತುಂತುರು ನೀರಾವರಿ, ಡಿಸೇಲ್ ಪಂಪ್ ಸೆಟ್ ಪ್ಯಾಕೇಜ್ ಮಾದರಿಯು ಯೋಜನೆಯಲ್ಲಿ ಸೇರಿರುತ್ತವೆ. ಸದರಿ ಯೋಜನೆಯ ಸವಲತ್ತು ಪಿರಿಯಾಪಟ್ಟಣ ತಾಲ್ಲೂಕಿನ ರೈತಬಾಂಧವರು ಉಪಯೋಗಿಸಿಕೊಂಡು, ಯೋಜನೆಯ ಸೌಲಭ್ಯ ಪಡೆಯಲು ಅರ್ಜಿಗಳನ್ನು ಕಸಬಾ, ಬೆಟ್ಟದಪುರ, ಹಾರನಹಳ್ಳಿ ಮತ್ತು ರಾವಂದೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು, ಅರ್ಜಿ ಸಲ್ಲಿಸಬೇಕೆಂದು ಕೃಷಿ ಇಲಾಖೆ ಪಿರಿಯಾಪಟ್ಟಣ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್.ವೈ ತಿಳಿಸಿದ್ದಾರೆ
Back to top button
error: Content is protected !!