ಕುಶಾಲನಗರ, ಆ 30: ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ಕುಶಾಲನಗರ ಸಂಚಾರಿ ಪೊಲೀಸರು ಬರೋಬ್ಬರಿ 14,500 ದಂಡ ವಿಧಿಸಿದ್ದಾರೆ.
ಸುಂದರನಗರದಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭ ಚಿಕ್ಕತ್ತೂರಿನ ಕಾರ್ತಿಕ ಎಂಬಾತನು ಅತಿ ವೇಗದಿಂದ ಹೆಲ್ಮೆಟ್ ರಹಿತವಾಗಿ ಬೈಕ್ (ಡ್ಯೂಕ್-200) ಚಾಲಿಸುತ್ತಿದ್ದ ಸಂದರ್ಭ ತಡೆದು ಪರಿಶೀಲಿಸಿದಾಗ ಚಾಲಕ ಪರವಾನಗಿ ಹೊಂದಿಲ್ಲದಿರುವುದು ಕಂಡುಬಂದಿದೆ. ಸವಾರ ಹಾಗೂ ಹಿಂಬದಿ ಸವಾರ ಹೆಲ್ನೆಟ್ ರಹಿತ ಚಾಲನೆ, ಬೈಕ್ ನಲ್ಲಿ ಎರಡು ಮಿರರ್, ಮುಂದಿನ ಹೆಡ್ ಲೈಟ್ ಇಲ್ಲದಿರುವುದು, ಪ್ರತ್ಯೇಕ ಎಲ್ಇಡಿ ಅಳವಡಿಕೆ, ಸೈಲೆನ್ಸರ್, ಮೂಲ ಬಣ್ಣ ಬದಲಾವಣೆ ಮಾಡಿರುವುದು ಕಂಡುಬಂದ ಹಿನ್ನಲೆಯಲ್ಲಿ ಆತನಿಗೆ ರೂ 14500 ದಂಡ ವಿಧಿಸಲಾಗಿದೆ.
Back to top button
error: Content is protected !!