ಕುಶಾಲನಗರ, ಆ 24: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ಆರ್.ಕೆ ಲೇಔಟ್‌ನಲ್ಲಿರುವ ಈಶ್ವರ್ ಎಂಬುವವರ ಹೊಸ ಮನೆ ಕಟ್ಟಡ ಕಾಮಗಾರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ನಲ್ಲಿದ ವಿವಿಧ ಮಾದರಿಯ ಕಟ್ಟಿಂಗ್ ಮಿಷನ್, ಡ್ರಿಲಿಂಗ್ ಮಿಷನ್, ಏರ್‌ಬೋವರ್, ವ್ಯಾಕ್ಯೂಮ್ ಕ್ಲೀನರ್, ಗ್ರೆಂಡಿಂಗ್ ಮಿಷನ್ ಮತ್ತು ಇತರೇ ಒಟ್ಟು 11 ಮಿಷನ್‌ಗಳನ್ನು ದಿನಾಂಕ: 20- 08-2024 ರಂದು ಅಪರಿಚಿತರು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ: 331, 305 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಆರ್.ವಿ ಗಂಗಾಧರಪ್ಪ, ಡಿಎಸ್ ಪಿ, ಸೋಮವಾರಪೇಟೆ ಉಪವಿಭಾಗ, ಪ್ರಕಾಶ್.ಬಿ.ಜೆ, ಪಿಐ & ಗೀತಾ.ಹೆಚ್.ಟಿ. ಪಿಎಸ್‌ಐ, ಕುಶಾಲನಗರ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದಿನಾಂಕ: 23-08-2024 ರಂದು ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ
ಆರೋಪಿಗಳ ವಿವರ;
1. ಮಹಮದ್ ಆಸೀಫ್, 19 ವರ್ಷ, ಗೋಪಾಲ್ ಸರ್ಕಲ್ ಕುಶಾಲನಗರ,
2. ಕೀರ್ತನ್ ವಿ.ಬಿ, 26 ವರ್ಷ, ಹೆಚ್.ಆರ್.ಪಿ ಕಾಲೊನಿ ಕುಶಾಲನಗರ.
3. ವಿಸೃತ್, 18 ವರ್ಷ, ಚೌಡೇಶ್ವರಿ ಬಡಾವಣೆ, ಕುಶಾಲನಗರ,
4. ಜಯಪ್ರಕಾಶ್ ಹೆಚ್, 22 ವರ್ಷ, ಟೌನ್ ಕಾಲೋನಿ ಕುಶಾಲನಗರ.
ವಶಪಡಿಸಿಕೊಂಡಿರುವ ಸ್ವತ್ತುಗಳ ವಿವರ;
1. ಕಳವು ಮಾಡಿದ್ದ ಕಟ್ಟಿಂಗ್ ಮಿಷನ್, ಡೀಲಿಂಗ್ ಮಿಷನ್, ಏರ್ ಬ್ಲೋವರ್, ವ್ಯಾಕ್ಯೂಮ್ ಕ್ಲೀನರ್, ಗ್ರೆಂಡಿಂಗ್ ಮಿಷನ್ ಮತ್ತು ಇತರೇ ఒಟ್ಟು 11 ಮಿಷನ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
2. ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಟ್ಟು 08 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಗಳ ವಿಚಾರಣೆಯ ಸಂದರ್ಭ 2022 & 2023 ನೇ ಸಾಲಿನಲ್ಲಿ ಅರಕಲಗೂಡು, ಬೆಟ್ಟದಪುರ, ಪಿರಿಯಾಪಟ್ಟಣ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿ-ಚಕ್ರ ವಾಹನ ಕಳವು ಮಾಡಿರುವುದು ತನಿಖೆಯಲ್ಲಿ ಕಂಡುಬಂದಿರುತ್ತದೆ ಹಾಗೂ ಆರೋಪಿಗಳಾದ ಮಹಮ್ಮದ್ ಆಸೀಪ್, ಕೀರ್ತನ್, ವಿಶ್ವತ್ ಗಳ ಮೇಲೆ ಈ ಹಿಂದೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು & ಕಳವು ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಆರೋಪಿಗಳಾದ ಕೀರ್ತನ್ & ಜಯಪ್ರಕಾಶ್ ವಿರುದ್ಧ ಈ ಹಿಂದೆ ಸೋಮವಾರಪೇಟೆ, ಕುಶಾಲನಗರ ಟೌನ್ & ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್, ಕಳವು, ದರೋಡೆ, ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿರುತ್ತಾರೆ.
Back to top button
error: Content is protected !!