ಕುಶಾಲನಗರ, ಮಾ 14: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಶ್ರೀ ಮಾರಮ್ಮ ಮತ್ತು ಶ್ರೀ ಹುಚ್ಚಮ್ಮ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಚಂಡಿಕಾ ಹೋಮ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಎರಡು ದಿನಗಳ ಪೂಜಾ ಮಹೋತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆ 7 ಗಂಟೆಗೆ ಕಾವೇರಿ ನದಿಯಲ್ಲಿ ಗಂಗೆ ಪೂಜೆ ನೆರವೇರಿಸಿ ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಮೆರವಣಿಗೆ ಮೂಲಕ ದೇವಾಲಯಕ್ಕೆ ಬಂದು ಪ್ರತಿಷ್ಠಾಪಿಸಿದರು. ಬೆಳಿಗ್ಗೆ10 ಗಂಟೆಗೆ ಗಣಪತಿ ಹೋಮ ಪ್ರಾರ್ಥನೆ, ಪುಣ್ಯಾಹ ಮತ್ತು ದೇವ ನಂದಿ ಸಂಜೆ 5.30ಕ್ಕೆ ಕಳಸ ಸ್ಥಾಪನೆ, ವಾಸ್ತು ಹೋಮ,ಪ್ರಸಾದ ಶುದ್ಧಿ,ಆದಿವಾಸಿ ಪೂಜೆ,ಹೋಮ ಬಲಿ ಮತ್ತು ಮಹಾಬಲಿ ಪೂಜೆಗಳು ನೆರವೇರಿದವು.
ಶುಕ್ರವಾರ ಬೆಳಿಗ್ಗೆ 6.50 ರಿಂದ ಪ್ರತಿಷ್ಠಾ ಹೋಮ ಪೂಜೆ,9.30ಕ್ಕೆ ಮಹಾಚಂಡಿಕಾ ಯಾಗ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಮಾಡಲಾಯಿತು.
ನೆರೆದಿದ್ದ ಭಕ್ತಾದಿಗಳಿಗೆ ಸಮಿತಿ ವತಿಯಿಂದ ಅನ್ನಸಂತಾರ್ಪಣೆ ನೆರವೇರಿಸಲಾಯಿತು. ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯ ಪ್ರಧಾನ ಅರ್ಚಕ ಗಿರೀಶ್ ಭಟ್ ಹಾಗೂ ಗಣಪತಿ ದೇವಾಲಯ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ಜರುಗಿದವು. ಪ್ರತಿಷ್ಠಾನ ಮಹೋತ್ಸವ ಅಂಗವಾಗಿ ದೇವಾಲಯ ಹಾಗೂ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಗುಮ್ಮನಕೊಲ್ಲಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಈ ಸಂದರ್ಭ ದೇವಾಲಯ ಸಮಿತಿ
ಅಧ್ಯಕ್ಷ ವಿಶ್ವ, ಉಪಾಧ್ಯಕ್ಷ ಜೈರಾಜ್,ಕಾರ್ಯದರ್ಶಿ ನವೀನ್ಕುಮಾರ್,ಖಜಾಂಜಿ ಗಣಪತಿ ,ಗೌರವಾಧ್ಯಕ್ಷ ಬಿ.ಜಿ.ರವಿ,ನಿರ್ದೇಶಕ ಮಣಿ,ಸ್ವಾಮಿಗೌಡ, ಬಿ.ಲೋಕೇಶ್,ರವಿ,ಗಣೇಶ,ಎಂ.ಎಸ್.ಲೋಕೇಶ್, ಚಂದ್ರ,ಮಂಜು,ಭರತ್,ಲಿಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.
Back to top button
error: Content is protected !!