ಕ್ರೈಂ
ಸ್ಕೂಟಿಗೆ ಬಸ್ ಡಿಕ್ಕಿ : ಸವಾರ ದುರ್ಮರಣ


ಕುಶಾಲನಗರ, ಜೂ 16: ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಗದ್ಧೆಹಳ್ಳ ಪೆಟ್ರೋಲ್ ಬಂಕ್ ಮುಂಭಾಗ ಖಾಸಗಿ ಬಸ್, ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾದ ಗಾಯಗೊಂಡ ಸ್ಕೂಟಿ ಸವಾರ ಪಟ್ಟೆಮನೆ ಲೋಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.