ಅಪಘಾತ

ಕುಶಾಲನಗರ ಡಿಗ್ರಿ ಕಾಲೇಜು ಮುಂಭಾಗ ಭೀಕರ ಅಪಘಾತ

ನಿಯಂತ್ರಣ ತಪ್ಪಿ ಕರೆಂಟ್ ಕಂಬ, ಮರಕ್ಕೆ ಡಿಕ್ಕಿಯಾದ ಕಾರು

ಕುಶಾಲನಗರ, ಏ 28: ಕುಶಾಲನಗರ-ಹಾರಂಗಿ ರಸ್ತೆಯಲ್ಲಿ ಭಾನುವಾರ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಜಯಪ್ರಕಾಶ್ ಎಂಬವರಿಗೆ ಸೇರಿದ ಮಾರುತಿ‌ ಕ್ರೆಟಾ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಮರಕ್ಕೆ ಗುದ್ದಿದೆ.

ಅಪಘಾತ ಸಂದರ್ಭ ಕಾರಿನಲ್ಲಿ ಮೂವರು ಇದ್ದರು ಎನ್ನಲಾಗಿದೆ. ಓರ್ವನ‌ ಎರಡು ಕಾಲು ತುಂಡರಿಸಿದೆ.‌ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ಹೆಚ್ಚಿನ‌ ಮಾಹಿತಿ ಲಭಿಸಬೇಕಿದೆ.

ಜಯಪ್ರಕಾಶ್ ಅವರು ಇತ್ತೀಚಿಗೆ ಮೃತಪಟ್ಟ ಸಂತೋಷ್ ಎಂಬವರ ಸಹೋದರ ಎಂದು ತಿಳಿದುಬಂದಿದೆ. ಔತಣಕೂಟವೊಂದರಲ್ಲಿ ಪಾಲ್ಗೊಂಡು ಡಿಗ್ರಿ ಕಾಲೇಜು ವ್ಯಾಪ್ತಿಯಲ್ಲಿ ಇರುವ ಇವರ ಮನೆಗೆ ತೆರಳುವ ಸಂದರ್ಭ ಈ ಘಟನೆ ಸಂಭವಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!