ಕುಶಾಲನಗರ, ಏ 19:ದಿನಾಂಕ: 18-04-2024 ರಂದು ಸಂಜೆ ಸಮಯ ಸುಮಾರು 7.00 ಗಂಟೆಗೆ ವಾಲ್ಲೂರು ತ್ಯಾಗತ್ತೂರು ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ಸುಮಾರು 10 ಜನ ಕಾರ್ಯಕರ್ತರುಗಳು ಮನೆ-ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡುತ್ತಾ ಮನೆಯ ಮುಂಭಾಗ ಗೇಟ್ ಬಳಿಯ ಫುಟ್ ಪಾತ್ನಲ್ಲಿ ನಿಂತಿರುವಾಗ ಸಿದ್ದಾಪುರ ಕಡೆಯಿಂದ ವೇಗವಾಗಿ ಬಂದ ಸಿಲ್ವರ್ ಬಣ್ಣದ ಮಾರುತಿ ಎಸ್ಟೀಮ್ (ಸಂಖ್ಯೆ ಕೆಎ-02 ಜೆಡ್ -7347) ವಾಹನವು ಕಾರ್ಯಕರ್ತರ ಮೇಲೆ ಗುದ್ದಿಸಿ ಚಾಲಕ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ. ಕಾರು ಗುದ್ದಿದ ಪರಿಣಾಮ ಎಸ್.ಎಸ್.ರಾಮಪ್ಪ ರವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರತೀಶ್ ಮತ್ತು ಚಂದ್ರರಾಜು ರವರಿಗೆ ಗಂಭೀರ ಗಾಯಗಳಾಗಿರುತ್ತವೆ. ನಮ್ಮನ್ನು ಬಿಜೆಪಿ ಕಾರ್ಯಕರ್ತರೆಂದು ಗುರುತಿಸಿ ಕೊಲೆ ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀ ಉದಯ್ ಕುಮಾರ್.ಟಿ.ಕೆ. ವಾಲ್ನೂರು ಗ್ರಾಮ ರವರಿಂದ ಲಿಖಿತ ದೂರು ಸ್ವೀಕರಿಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 302, 307 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಘಟನೆ ಸ್ಥಳಕ್ಕೆ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ, ಸುಂದರ್ ರಾಜ್.ಕೆ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಹೇಶ್ ಕುಮಾರ್.ಎಸ್, ಡಿಎಸ್ ಪಿ, ಮಡಿಕೇರಿ ಉಪ ವಿಭಾಗ, ಆರ್.ವಿ.ಗಂಗಾಧರಪ್ಪ, ಡಿಎಸ್ ಪಿ, ಸೋಮವಾರಪೇಟೆ ಉಪವಿಭಾಗ ಹಾಗೂ ಸಿದ್ದಾಪುರ ಪೊಲೀಸ್ ಠಾಣೆ ಅಧಿಕಾರಿ & ಸಿಬ್ಬಂದಿಗಳು ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ದೂರುದಾರರು ನೀಡಿದ ಮಾಹಿತಿ ಅನ್ವಯ ಆರೋಪಿಗಳ ಪತ್ತೆಗಾಗಿ ಡಿಎಪಿ, ಮಡಿಕೇರಿ ಉಪವಿಭಾಗದ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಕೃತ್ಯ ನಡೆಸಿದ ಆರೋಪಿಗಳಾದ ವಾಹನದ ಮಾಲೀಕ ಮಹಮ್ಮದ್ ಹರ್ಷದ್, 26 ವರ್ಷ, ಕಂಬಿಬಾಣೆ ಗ್ರಾಮ ಹಾಗೂ ವಾಹನದ ಚಾಲಕ ಶೌಕತ್ ಅಲಿ, 32 ವರ್ಷ, ಕಂಬಿಬಾಣೆ ಗ್ರಾಮ ಎಂಬುವವರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರೆದಿರುತ್ತದೆ.
Back to top button
error: Content is protected !!