ಧಾರ್ಮಿಕ

ರಾಮಮಂದಿರ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ:ಕುಶಾಲನಗರದಲ್ಲಿ ಲಾಡು ವಿತರಣೆಗೆ ತಯಾರಿ

ಮೂರು ದಿನಗಳಲ್ಲಿ‌ 35 ಸಾವಿರ ಲಾಡು ತಯಾರಿ:

ಕುಶಾಲನಗರ, ಜ 20:‌ ಶ್ರೀ ರಾಮ ಸೇವಾ ಸಮಿತಿ, ಕುಶಾಲನಗರ ಮತ್ತು ಕುಶಾಲನಗರ ಸಮಸ್ತ ದೇವಾಲಯಗಳ ಒಕ್ಕೂಟ ಆಶ್ರಯದಲ್ಲಿ ಅಯೋಧ್ಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮದ ಪ್ರಯುಕ್ತ ಕುಶಾಲನಗರದ ಶ್ರೀ ಮಹಾಗಣಪತಿ ದೇವಾಲಯದಿಂದ ಲಾಡು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ನಿಮಿತ್ತ ಲಾಡು ಪ್ರಸಾದವನ್ನು ಪೊಟ್ಟಣ್ಣಕ್ಕೆ ತುಂಬಿಸುವ ಕಾರ್ಯವನ್ನು ಸ್ವಯಂ ಸೇವಕರು ನಡೆಸುತ್ತಿದ್ದಾರೆ. ಸುಮಾರು 500 ಮಂದಿ ಪಾಲ್ಗೊಂಡು 35 ಸಾವಿರ ಲಾಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಶಾಲನಗರದ ಗಾಯತ್ರಿ ಕಲ್ಯಾಣ‌ ಮಂಟಪದಲ್ಲಿ ಲಾಡು ತಯಾರಿ ಕಾರ್ಯ ಭರದಿಂದ ಸಾಗಿದ್ದು ನೂರಾರು ಮಂದಿ ಸ್ವಯಂ ಸೇವಕರು ಪಾಲ್ಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!