ಕುಶಾಲನಗರ, ಜ 19: ಕುಶಾಲನಗರ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ ಎಫ್ -6 ಕೂಡ್ಲೂರು ಕೈಗಾರಿಕಾ ಬಡಾವಣೆ, ಎಫ್ 2 ಕಾವೇರಿ, ಎಫ್ 8 ಸೋಮೇಶ್ವರ ಫೀಡರ್ ಗಳ ಮಾರ್ಗದಲ್ಲಿ ತುರ್ತಾಗಿ ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ದಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕುಶಾಲನಗರದ ಮಾರ್ಕೆಟ್ ರಸ್ತೆಯಿಂದ ಮುಳ್ಳುಸೋಗೆ, ಕೂಡ್ಲೂರು ಇಂಡಸ್ಟ್ರಿಯಲ್ ಏರಿಯಾ, ಕೂಡುಮಂಗಳೂರು, ಚಿಕ್ಕತ್ತೂರು ಮತ್ತು ಕೂಡಿಗೆ ಗ್ರಾಮಗಳ ಸುತ್ತ ಮುತ್ತಲಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಜ 20 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಕುಶಾಲನಗರ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Back to top button
error: Content is protected !!