ಕುಶಾಲನಗರ, ನ 03 : ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ಶ್ರೀ ಯೋಗಿನಾರೇಯಣ
ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಕುಶಾಲನಗರದ ಆರ್. ಸೋಮಶೇಖರ್ ಆಯ್ಕೆಯಾಗಿದ್ದಾರೆ.
ಕುಶಾಲನಗರದ ಸಂಘದ ಭವನದಲ್ಲಿ ಹಿಂದಿನ ಅಧ್ಯಕ್ಷ ಬಿಎಸ್ ಆರ್ ಬಾಬಣ್ಣ ಅವರ ಅಧ್ಯಕ್ಷತೆಯಲ್ಲಿ ಸಂಘದ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಂಘದ ಗೌರವ ಅಧ್ಯಕ್ಷರಾಗಿ ಆರ್.ಬಾಬಣ್ಣ, ಉಪಾಧ್ಯಕ್ಷರುಗಳಾಗಿ ಟಿ.ಎಸ್.ನಿರಂಜನ್, ಟಿ.ಆರ್.ಜಗದೀಶ್, ಸಿ.ಆರ್.ಮದನ್, ಕಾರ್ಯದರ್ಶಿಯಾಗಿ ಟಿ.ಎನ್.ಜಯರಾಮ್, ಸಹಕಾರ್ಯದರ್ಶಿಯಾಗಿ ಸಿ.ಜಗದೀಶ್, ಖಜಾಂಚಿಯಾಗಿ ಜಿ.ಆರ್.ಸಂಧ್ಯಾಗಣೇಶ್, ನಿರ್ದೇಶಕರುಗಳಾಗಿ ಕೆ.ಬಾಲಸುಬ್ರಮಣ್ಯಂ, ಉಮೇಶ್, ಕಿರಣ್, ಕುಶ, ನೂತನ್, ಸವಿತಾ ದಯಾನಂದ, ಮಂಜುಳಾ,
ಗೌರವ ಸಲಹೆಗಾರರಾಗಿ ಟಿ.ಎಸ್.ಬಾಲಕೃಷ್ಣ, ಟಿ.ಬಿ.ಸತೀಶ್, ಟಿ.ಡಿ.ದಯಾನಂದ, ಎಂ.ಆರ್.ಗಣೇಶ್ ನೇಮಕವಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಜಯರಾಮ್ ತಿಳಿಸಿದ್ದಾರೆ.
ನೂತನ ಅಧ್ಯಕ್ಷರಾದ ಸೋಮಶೇಖರ್ ಮಾತನಾಡಿ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಇರುವ ಯೋಗಿ ನಾರೇಯಣ ಬಲಿಜ ಸಮಾಜದ ಬೆಳವಣಿಗೆಗೆ ಶಕ್ತಿ ಮೀರಿ ಶ್ರಮಿಸಲಾಗುವುದು.
ಸಂಘದ ಸದಸ್ಯರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ದಿ ಹೊಂದಬೇಕಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ರಾಜಕಾರಣಿಗಳು ಬಲಿಜ ಸಮಾಜವನ್ನು ಗುರುತಿಸಿ ಟಿಕೇಟ್ ನೀಡುವ ಮೂಲಕ ಸಮಾಜದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಸೋಮಶೇಖರ್ ಕರೆಕೊಟ್ಟರು.
Back to top button
error: Content is protected !!