ಕುಶಾಲನಗರ, ಜ 02: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ವಿನಾಯಕ ಯುವಕ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಸಂಘದ ವಾರ್ಷಿಕೋತ್ಸವ ಅಂಗವಾಗಿ 2024 ನೇ ವರ್ಷದ ಕ್ಯಾಲೆಂಡರ್ ಅನ್ನು ಗ್ರಾಮದ ಶ್ರೀ ಕನ್ನಿಕಾ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.
ಗ್ರಾಮದ ಹಿರಿಯರಾದ ಮಲ್ಲು ಪೂಜಾರಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಪಂ ಸದಸ್ಯ ದಿನೇಶ್, ಯುವಕ ಸಂಘದ ಗೌರವಾಧ್ಯಕ್ಷ ಯೋಗೇಂದ್ರನ್, ಅಧ್ಯಕ್ಷ ಸಿ.ಸಿ.ಸ್ವಾಮಿ, ಉಪಾಧ್ಯಕ್ಷ ಕೃಷ್ಣ, ಖಜಾಂಚಿ ಬಿಜು, ಕಾರ್ಯದರ್ಶಿ ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಅನು ಕುಮಾರ್ ಸೇರಿದಂತೆ ಸದಸ್ಯರುಗಳು, ದೇವಾಲಯ ಅರ್ಚಕ ನಾಗೇಂದ್ರ ಇದ್ದರು.
ಸುಮಾರು 300 ಕ್ಯಾಲೆಂಡರ್ ಅನ್ನು ಗ್ರಾಮದ ಮನೆಮನೆಗೆ ಹಂಚಲಾಗುವುದು ಎಂದು ಸಂಘದ ಪ್ರಮುಖರು ತಿಳಿಸಿದರು.
Back to top button
error: Content is protected !!