ಕುಶಾಲನಗರ, ಡಿ 28: ಕೂಡಿಗೆ ಗ್ರಾಪಂನ ತುರ್ತು ಸಭೆ ಗ್ರಾಪಂ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶಿರಹೊಳಲು ಗ್ರಾಮದ ವಿಮಲ ಅವರಿಗೆ ವಿದ್ಯುತ್ ಸಂಪರ್ಕಕ್ಕೆ ಗ್ರಾಪಂ ನಿಂದ ಎನ್ಒಸಿ ನೀಡಿರುವ ಬಗ್ಗೆ ತೀವ್ರ ಚರ್ಚೆ ನಡೆಯಿತು. ಎನ್ಒಸಿ ನೋಡಿರುವ ಪಿಡಿಒ ಕ್ರಮದ ವಿರುದ್ದ ಅಧ್ಯಕ್ಷರು, ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು. ಸಮರ್ಕಪ ಪರಿಶೀಲನೆ ನಡೆಸದೆ ಎನ್ಒಸಿ ನೀಡಲಾಗಿದೆ ಎಂದು ಆರೋಪಿಸಿದರು.
ಎನ್ಒಸಿ ಪಡೆಯಲು ಅರ್ಜಿದಾರರು ನನಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಪಿಡಿಒ ಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ಕ್ರಮವಹಿಸಲು ಚೆಸ್ಕಾಂ ಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದರು.
ತಪ್ಪು ಮಾಹಿತಿ ನೀಡಿದ್ದಲ್ಲಿ ಅಂತಹ ಮಂಜೂರಾತಿಯನ್ನು ರದ್ದುಗೊಳಿಸಿ, ಆಗಿರುವ ತಪ್ಪನ್ನು ಸರಿಪಡಿಸಲು ಕ್ರಮಕೈಗೊಳ್ಳುವಂತೆ ಸದಸ್ಯರಾದ ಟಿ.ಪಿ.ಹಮೀದ್, ರವಿ ಆಗ್ರಹಿಸಿದರು.
ಮದಲಾಪುರದ ಶಿರಹೊಳಲು ಗ್ರಾಮದಲ್ಲಿ ವಿವಾದಿತ ಕಟ್ಟಡದ ವಿಚಾರ ಸಂಬಂಧ ಪರ ವಿರೋಧ ಚರ್ಚೆಗಳು ನಡೆಯಿತು.
(TBC)
Back to top button
error: Content is protected !!