ಕುಶಾಲನಗರ, ಡಿ 27: ಕುಶಾಲನಗರದಲ್ಲಿ ಹಾದುಹೋಗಿರುವ ಎನ್.ಎಚ್.275 ತೇಪೆ ಹಚ್ಚುವ ಕಾಮಗಾರಿಯಿಂದ ಸಂಕಷ್ಟ, ಅನಾನುಕೂಲಕ್ಕೆ ಒಳಗಾದವರು ಹಿಡಿಶಾಪ ಹಾಕುತ್ತಿದ್ದಾರೆ. ಯಾವುದೇ ಪ್ರಕಟಣೆ ಹೊರಡಿಸದೆ ದಿಢೀರನೆ ಕಾಮಗಾರಿ ಆರಂಭಿಸಿದ ಹಿನ್ನಲೆಯಲ್ಲಿ ಕುಶಾಲನಗರ ಬುಧವಾರ ದಟ್ಟಣೆ ಯಿಂದ ಕೂಡಿದ ದೃಶ್ಯ ದಿನವಿಡೀ ಕಂಡುಬಂತು. ಬೈಚನಹಳ್ಳಿ ಯಿಂದ ಪಾಲಿಟೆಕ್ನಿಕ್ ಕಾಲೇಜು ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಒಂದೆಡೆಯಾದರೆ ಜಿಲ್ಲೆಗೆ ಆಗಮಿಸಿ ತೆರಳುವ ಪ್ರವಾಸಿಗರ ದಂಡಿನಿಂದ ಸಂಚಾರ ಅಸ್ತವ್ಯಸ್ತತೆ ಎದುರಾಗಿತ್ತು. ಕನಿಷ್ಠ ಪೊಲೀಸ್ ಇಲಾಖೆಗೂ ಮಾಹಿತಿ ನೀಡದೆ ಯಾವುದೇ ಪ್ರಕಟಣೆ ಹೊರಡಿಸದೆ ದಿಢೀರ್ ಕಾಮಗಾರಿ ಕೈಗೊಂಡ ಕಾರಣ ವಾಹನ ಸಂಚಾರ ಸ್ತಬ್ದತೆ ಉಂಟಾಗಿತ್ತು.
Back to top button
error: Content is protected !!