ಕಾಮಗಾರಿ

ರಸ್ತೆ ಕಾಮಗಾರಿ ಕಳಪೆ, ಗ್ರಾಮಸ್ಥರ ಆಕ್ರೋಷ, ಅಧ್ಯಕ್ಷರಿಂದ ಪರಿಶೀಲನೆ

ಕುಶಾಲನಗರ, ಫೆ 20: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಜಿಪಂ ವತಿಯಿಂದ ಇತ್ತೀಚೆಗೆ ನಡೆಸಲಾಗಿದೆ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ಆರೋಪದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಡಾಂಬರೀಕರಣ ಗುಣಮಟ್ಟ ವೀಕ್ಷಿಸಿದರು. ಗ್ರಾಮಸ್ಥರ ಆರೋಪ ಹಿನ್ನಲೆಯಲ್ಲಿ ಜಿಪಂ ಅಭಿಯಂತರರನ್ನು ಸಂಪರ್ಕಿಸಿ ಕೂಡಲೆ ಗುಣಮಟ್ಟದಲ್ಲಿ ರಸ್ತೆ ಪುನರ್ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲು ತಿಳಿಸಿದರು.

ಈ ಸಂದರ್ಭ ಗ್ರಾಪಂ ಮಾಜಿ ಸದಸ್ಯ ಮಂಜು ಹಡ್ಲಳ್ಳಿ , ಸ್ಥಳಿಯರಾದ ಪ್ರಭಾಕರ್, ಆಕಾಶ್‌ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!