ಅವ್ಯವಸ್ಥೆ

ನಾಲ್ಕು ಗ್ರಾಮಗಳ ಸಂಪರ್ಕದ ಹಾರಂಗಿ ನಾಲೆಯ ರಸ್ತೆ ದುರಸ್ತಿಗೆ ಗ್ರಾಮಸ್ಥರ ಅಗ್ರಹ

ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ..

ಕುಶಾಲನಗರ, ಆ 3: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ, ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಹುಣಸೇಪಾರೆ ನಾಲ್ಕು ಗ್ರಾಮಗಳ ಸಂಪರ್ಕ ರಸ್ತೆಯು ಪ್ರಮುಖವಾಗಿ ಹಾರಂಗಿಯ ಮುಖ್ಯ ನಾಲೆಯ ರಸ್ತೆಯಾಗಿದೆ. ಈ ರಸ್ತೆಯು ಕಳೆದ ಎರಡು ವರ್ಷಗಳಿಂದ ತೀರ ಹಾಳಾಗಿ ಗುಂಡಿಮಾಯವಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು, ಗ್ರಾಮಸ್ಥರು ಶಾಲಾ ಕಾಲೇಜು ವಿಧ್ಯಾರ್ಥಿಗಳು ಮಳೆಗಾಲದಲ್ಲಿ ತಿರುಗಾಡಲು ಬಾರಿ ಕಷ್ಟವಾಗಿದೆ. ಹಾರಂಗಿ ಮುಖ್ಯ ನಾಲೆಯ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದ ಹಿನ್ನೆಲೆಯಲ್ಲಿ ಅನೇಕ ವಾಹನ ಸವಾರರು ಅಪಘಾತಗೊಂಡಿರುವ ಘಟನೆಗಳು ನಡೆದಿವೆ, ತುರ್ತಾಗಿ ರಸ್ತೆಯ ದುರಸ್ತಿಗೆ ಗ್ರಾಮಸ್ಥರ ಅಗ್ರಹವಾಗಿದೆ.
ನಾಲ್ಕು ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಮುಖ್ಯ ಘಟಕದ ಕೇಂದ್ರವು ರಸ್ತೆಗೆ ಹೊಂದಿಕೊಂಡಂತಿದೆ. ಆದರೆ ರಸ್ತೆಯಲ್ಲಿ ಈ ವಾಹನಗಳು ಸೇರಿದಂತೆ ನೂರಾರು ವಾಹನಗಳ ಓಡಾಟ ಇದ್ದರೂ ಸಹ ಸಂಬಂಧಿಸಿದ ಇಲಾಖೆಯವರು ಇದುವರೆಗೂ ಸ್ಪಂದನೆ ಮಾಡಿಲ್ಲ ಎಂದು ಈ ವ್ಯಾಪ್ತಿಯ ಗ್ರಾಮಗಳ ನೂರಾರು ಗ್ರಾಮಸ್ಥರ ಆರೋಪಿಸಿದ್ದಾರೆ.
ನಾಲೆಯ ರಸ್ತೆಯು ಒಂದು ಕಿಲೋಮೀಟರ್ ದೂರದ ರಸ್ತೆಯಾಗಿದ್ದು, ಈ ರಸ್ತೆಯು ಗುಂಡಿಮಾಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ವಾಹನಗಳ ಅವಘಡಗಳು ಸಂಭವಿಸಿ, ಸಮೀಪದ ‌ನಾಲೆಗೆ ವಾಹನ ಸೇರಿದಂತೆ ಸಾರ್ವಜನಿಕರು ಬಿದ್ದ ಘಟನೆ ಬೇಸಿಗೆ ಸಂದರ್ಭದಲ್ಲಿ ನಡೆದಿದೆ. ಮುಂದೆ ಆಗುವ ಅನಾಹುತಗಳನ್ನು ತಡೆಯಲು ಸಂಬಂಧಿಸಿದ ಇಲಾಖೆಯವರು ಸ್ಧಳ ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಈ ಗ್ರಾಮ ವ್ಯಾಪ್ತಿಯ ಪ್ರಮುಖರಾದ ದೊಡ್ಡಯ್ಯ, ಧರ್ಮ, ಸಣ್ಣಸ್ವಾಮಿ, ರವಿ, ಗಿರೀಶ್, ನಾಗಣ್ಣ, ಪುಟ್ಟೆಗೌಡ, ಸುಬ್ರಹ್ಮಣಿ, ಶಿವಣ್ಣ, ಕೃಷ್ಣಪ್ಪ, ರೈತ ಸಮಿತಿಯ ಅಧ್ಯಕ್ಷ ಅಪ್ಪಜಿಗೌಡ, ಸೇರಿದಂತೆ ನೂರಾರು ಗ್ರಾಮಸ್ಥರ ಅಗ್ರಹವಾಗಿದೆ.
ಪ್ರತಿಭಟನೆಗೆ ಸಿದ್ದತೆ. ನಾಲ್ಕು ಗ್ರಾಮಗಳ ಸಂಪರ್ಕ ರಸ್ತೆಯನ್ನು ಸರಿಪಡಿಸುವಂತೆ ಕಳೆದ ಅನೇಕ ಬಾರಿ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ, ಮತ್ತು ಕುಶಾಲನಗರ ಪುರಸಭೆಯ ಅಧಿಕಾರಿಗಳಿಗೂ ಮನವಿಯನ್ನು ಸಲ್ಲಿದರೂ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ದೊರೆತ್ತಿಲ್ಲ, ಅಲ್ಲದೆ ಈ ರಸ್ತೆಯಲ್ಲಿ ಹೆಚ್ಚಾಗಿ ಕುಶಾಲನಗರ ಕಸ ವಿಲೇವಾರಿ ಘಟಕದ ಬಾರಿ ವಾಹನಗಳ ಓಡಾಟವು ಹೆಚ್ಚಾಗಿ ಇರುತ್ತದೆ, ಘಟಕದ ಕೇಂದ್ರಕ್ಕೆ ತೆರಳಲು ಮುಖ್ಯ ರಸ್ತೆಯು ಇದಾಗಿರುತ್ತದೆ, ಅದರೆ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ತೆರಳಿದರೂ ಸಹ ಇದುವರೆಗೂ ಯಾವುದೇ ರೀತಿಯ ಪ್ರಯೋಜನ ಅಗಿರುವುದಿಲ್ಲಾ , ಸಂಬಂಧಿಸಿದ ಇಲಾಖೆಯವರು ಸರಿಪಡಿಸದಿದ್ದರೆ ಸಂಬಂಧಿಸಿದ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!