ಕುಶಾಲನಗರ, ಸೆ 08: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ನಂಜರಾಪಟ್ಟಣ ಮತ್ತು ವಿರೂಪಾಕ್ಷಪುರ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಯಿತು.
ಗ್ರಾಪಂ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ನಂಜರಾಯಪಟ್ಟಣ ಗ್ರಾಮದ ಸರ್ವೆ ನಂ 5/1 ರಲ್ಲಿ 50 ಸೆಂಟ್ ಮತ್ತು ವಿರುಪಾಕ್ಷಪುರದಲ್ಲಿ ಸರ್ವೆ ನಂ 1/1 ರಲ್ಲಿ 65 ಸೆಂಟ್ ಜಾಗವನ್ನು ಸ್ಮಶಾನಕ್ಕೆ ಗುರುತಿಸಿ ಕಂದಾಯ ಇಲಾಖೆಯವರು ಮಂಜೂರಾತಿ ಪತ್ರವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿಯ ಅಧ್ಯಕ್ಷ ಸಿ ಎಲ್ ವಿಶ್ವ, ಉಪಾಧ್ಯಕ್ಷೆ ಸಮೀರ, ಸದಸ್ಯರುಗಳಾದ ಲೋಕನಾಥ್, ಆರ್. ಕೆ. ಚಂದ್ರ, ಜಾಜಿ, ಗಿರಿಜಮ್ಮ, ಅಭಿವೃದ್ಧಿ ಅಧಿಕಾರಿ ಕಲ್ಪ, ಕಾರ್ಯದರ್ಶಿ ಎಂ. ಆರ್. ಶೇಷಗಿರಿ, ಉಪ ತಹಶೀಲ್ದಾರ್ ಮಧುಸೂದನ್, ಪರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಸಚಿನ್ ಕುಲಕರ್ಣಿ ಇದ್ದರು.
Back to top button
error: Content is protected !!