ಅವ್ಯವಸ್ಥೆ
ಹದಗೆಟ್ಟ ಗೊಂದಿಬಸವನಹಳ್ಳಿ ರಸ್ತೆ ವ್ಯವಸ್ಥೆ: ಕೆಸರು ಗುಂಡಿಯಲ್ಲಿ ಸಂಚರಿಸುವ ದೌರ್ಭಾಗ್ಯ.


ಮೇಲ್ಭಾಗದಿಂದ ಹರಿದು ಬರುವ ನೀರು ಈ ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿ ಇಲ್ಲದ ಕಾರಣ ನೀರು ನಿಂತು ರಸ್ತೆ ಸಂಪೂರ್ಣ ಕೆಸರುಮಯವಾಗಿ ಕಾಲ್ನಡಿಗೆಯಲ್ಲಿ ಸಂಚರಿಸಲು ಕೂಡ ಸಾಧ್ಯವಾಗದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಈ ಮಾರ್ಗವನ್ನು ಅವಲಂಬಿಸಿರುವ 30 ಕ್ಕೂ ಅಧಿಕ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಇದೇ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಕೂಡಲೆ ರಸ್ತೆ ವ್ಯವಸ್ಥೆ ಸರಿಪಡಿಸಲು ಕೋರಿ ಗ್ರಾಮಸ್ಥರು ಗ್ರಾಪಂ ಗೆ ಮನವಿ ಸಲ್ಲಿಸಿದರು.