ಕುಶಾಲನಗರ, ನ 19: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನದಂದು ನೂತನ ಕಛೇರಿ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಹೇಳಿದರು.
ಕುಶಾಲನಗರ ಮುಳ್ಳುಸೋಗೆ ಯಲ್ಲಿ ಶಾಸಕರ ಕಛೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಮಂಗಳವಾರ ತಾನು ಕಛೇರಿಯಲ್ಲಿ ಲಭ್ಯವಿದ್ದು ಸಾರ್ವಜನಿಕರು ತಮ್ಮ ಅಹವಾಲು, ಕುಂದುಕೊರತೆ ಸಲ್ಲಿಸಬಹುದು.
ಇದೇ ಪ್ರಥಮ ಬಾರಿಗೆ ತಾಲೂಕಿನಲ್ಲಿ ಕಛೇರಿ ಆರಂಭಿಸಿದ್ದು ಎಲ್ಲರೂ ಮುಕ್ತವಾಗಿ ಇಲ್ಲಿಗೆ ಧಾವಿಸಿ ಸಮಸ್ಯೆ ತೋಡಿಕೊಳ್ಳಬಹುದು. ಅಧಿಕಾರಿ ವರ್ಗ ಅಗತ್ಯ ಪರಿಹಾರ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಕಛೇರಿ ಉದ್ಘಾಟನೆ ಮುನ್ನ ಮುಳ್ಳುಸೋಗೆ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಶಾಸಕರು ಪೂಜೆ ಸಲ್ಲಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯ ಎಂ.ಕೆ.ದಿನೇಶ್, ಪ್ರಮುಖರಾದ ಕೆ.ಕೆ.ಮಂಜುನಾಥ್ ಕುಮಾರ್, ಜಿ.ಬಿ.ಜಗದೀಶ್, ಶಿವಶಂಕರ್, ಕಿರಣ್, ನಟೇಶ್ ಗೌಡ, ಚಂದ್ರಶೇಖರ್, ಸುನಿತಾ, ಮತ್ತಿತರರು ಇದ್ದರು.
Back to top button
error: Content is protected !!