ಕುಶಾಲನಗರ, ಏ 16:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 2024ರಲ್ಲಿ ಮೇಲ್ವಿಚಾರಕರಾಗಿ ಭಡ್ತಿ ಹೊಂದಿದ ಮುಳ್ಳುಸೋಗೆ ಗ್ರಾಮದ ಸಂಗೀತ ದಿನೇಶ್ ಅವರು, ಚನ್ನರಾಯಪಟ್ಟಣ ಜಿಲ್ಲೆಯ ಕಿಕ್ಕೇರಿ ತಾಲ್ಲೂಕಿನ ಹರಿಹರಪುರ ವಲಯದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಮ್ಮ ಕರ್ತವ್ಯನಿಷ್ಠೆ, ಶಿಸ್ತು ಹಾಗೂ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿರುವ ಅವರು, 2024-25 ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ 2025-26 ಸಾಲಿನಲ್ಲಿಯೂ ಮತ್ತೆ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನವನ್ನು ಪಡೆದು ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಸಂಗೀತ ದಿನೇಶ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಂತು ಬಾಕಿಯನ್ನು ಶೂನ್ಯಕ್ಕೆ ತರುವಲ್ಲಿ ಯಶಸ್ಸು ಸಾಧಿಸಲಾಗಿದೆ. outstanding ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ, ಪ್ರಗತಿನಿಧಿ ವಿತರಣೆ ಹಾಗೂ ಸದಸ್ಯರ ಸೇರ್ಪಡೆಯಲ್ಲಿ ಜಿಲ್ಲೆಯ ಮಟ್ಟದಲ್ಲಿ ಹೆಚ್ಚುವರಿ ಸಾಧನೆ ಮಾಡಲಾಗಿದೆ.
ಗ್ರಾಮಾಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ, ಸದಸ್ಯರೊಂದಿಗೆ ಉತ್ತಮ ಸಂಪರ್ಕ, ಜನಸೇವೆಯ ಮನೋಭಾವ ಹಾಗೂ ತಂಡದ ಸಮನ್ವಯದಿಂದ ಅವರ ಕಾರ್ಯವೈಖರಿ ಜಿಲ್ಲೆಯ ಮಟ್ಟದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಈ ಸಾಧನೆಗೆ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು, ಗೌರವ ಹಾಗೂ ಸಾಧನೆಗಳು ದೊರಕಲಿ ಎಂದು ಹಾರೈಸಿದ್ದಾರೆ.
Back to top button
error: Content is protected !!