ಚುನಾವಣೆ

ಲ್ಯಾಂಪ್ಸ್ ಅಧ್ಯಕ್ಷರಾಗಿ ಎಸ್.ಆರ್.ಅರುಣ್ ರಾವ್ ಎರಡನೇ‌ ಬಾರಿಗೆ ಪುನರಾಯ್ಕೆ

ಕುಶಾಲನಗರ, ಫೆ 24: ಸೋಮವಾರಪೇಟೆ ತಾಲೂಕಿನ ಗಿರಿಜನ‌ ದೊಡ್ಡಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಅರುಣ್ ರಾವ್ ಎರಡನೇ ಬಾರಿಗೆ ಪುನರಾಯ್ಕೆಯಾದರು.
10 ಮಂದಿ ನಿರ್ದೇಶಕರ ಸ್ಥಾನಕ್ಕೆ‌ ಫೆ.13 ರಂದು ನಡೆದ ಚುನಾವಣೆಯಲ್ಲಿ ಅರುಣ್ ರಾವ್ ತಂಡ ಜಯಭೇರಿ ಬಾರಿಸಿತ್ತು. ಈ ಹಿನ್ನಲೆಯಲ್ಲಿ ಸೋಮವಾರ
ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಸ್.ಆರ್.ಅರುಣ್ ರಾವ್, ಉಪಾಧ್ಯಕ್ಷರಾಗಿ ಕಾವೇರಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಕಾವೇರ ಅಭಿನಂದನೆ‌ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಎಸ್.ಆರ್.ಅರುಣ್ ರಾವ್, ಚುನಾವಣೆ ಸಂದರ್ಭ ಎದುರಾಳಿ ತಂಡದವರು ತಮ್ಮ‌ ಮೇಲೆ ಅಪಪ್ರಚಾರ ನಡೆಸಿದ್ದರು. ನೈಜ ಗಿರಿ ಜನರಿಗೆ ಮತ ನೀಡುವಂತೆ ಕೋರಿದ್ದರು. ಅದರಂತೆ ಮತದಾರರು ಅವರನ್ನೇ ದೂರವಿಟ್ಟು ನೈಜ ಗಿರಿಜನರನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಬಿ.ಎಸ್.ಚಂದ್ರ, ಬಿ.ಸಿ. ಕಮಲ, ರಾಜು, ಕಾಳಯ್ಯ, ಉದಯಕುಮಾರ್, ಶ್ಯಾಮ್, ಗಂಗಾಧರ್, ದೇವೀರಮ್ಮ, ಚುನಾವಣಾ ಅಧಿಕಾರಿ ಹಿತೇಂದ್ರ, ಹಾಗೂ ಕಾರ್ಯನಿರ್ವಾಹಣಾಧಿಕಾರಿ ಹನಿ ಕುಮಾರ್ ಸೇರಿದಂತೆ ಬೆಂಬಲಿಗರಾದ ಸುನಿಲ್ ರಾವ್, ರಾಜು, ಪುಟ್ಟ ಮತ್ತಿತರರು ಇದ್ದರು.
ನೂತನ ಆಡಳಿತ ಮಂಡಳಿಗೆ ಶಾಸಕ ಡಾ.ಮಂತರ್ ಗೌಡ ಶುಭ ಕೋರಿದರು. ಯಾರಿಗೂ ತಾರತಮ್ಯ ಮಾಡದೆ ಸಂಘ ಹಾಗೂ ಸದಸ್ಯರ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭ ನೂತನ ಆಡಳಿತ ಮಂಡಳಿಯಿಂದ ಶಾಸಕ ಡಾ.ಮಂತರ್ ಗೌಡ ಹಾಗೂ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!