ಕಾರ್ಯಕ್ರಮ

ನನ್ನ ಮಣ್ಣು, ನನ್ನ ದೇಶ ಅಮೃತ ಕಳಸ‌ ಅಭಿಯಾನಕ್ಕೆ ಚಾಲನೆ

ಕುಶಾಲನಗರ, ಅ 07: ಕುಶಾಲನಗರ ಪುರಸಭೆ ವತಿಯಿಂದ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಣ್ಣಿಗೆ ಹಾಗೂ ವೀರಯೋಧರ ನಮಿಸುವ ಈ ಅಭಿಯಾನಕ್ಕೆ ಪುರಸಭೆ ಸದಸ್ಯರು ಕಳಶಕ್ಕೆ ಮಣ್ಣು ಹಾಗೂ ಅಕ್ಕಿ ತುಂಬಿಸುವ ಮೂಲಕ ಚಾಲನೆ ನೀಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಉದಯಕುಮಾರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು. ಪುರಸಭೆ ಎಲ್ಲಾ ವಾರ್ಡ್ ಗಳಿಂದ ಈ‌ ಕಳಶ ತುಂಬಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಡಿ.ಕೆ.ತಿಮ್ಮಪ್ಪ ಮಾತನಾಡಿ, ವೀರ ಯೋಧರ ತ್ಯಾಗ ಸ್ಮರಿಸಿ ಅವರ ಸ್ಮಾರಕ್ಕೆ ನಿರ್ಮಾಣ ಹಿನ್ನಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ಈ‌ ಸಂದರ್ಭ ಪುರಸಭೆ ಸದಸ್ಯರಾದ ಎಂ.ಕೆ.ದಿನೇಶ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಶೇಖ್ ಖಲೀಮುಲ್ಲಾ, ಎಂ.ಬಿ.ಸುರೇಶ್, ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಜಿ.ಬಿ.ಜಗದೀಶ್, ಪ್ರಮುಖರಾದ ಚಂದ್ರು ಸೇರಿದಂತೆ ಪುರಸಭೆ ಸಿಬ್ಬಂದಿ ವರ್ಗದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!