ಪ್ರಕಟಣೆ

ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘ ಚುನಾವಣೆ: ನಿಕಟಪೂರ್ವ ಅಧ್ಯಕ್ಷರ ಅವಿರೋಧ ಆಯ್ಕೆ

ಕುಶಾಲನಗರ, ಅ 06: ರಾಮೇಶ್ವರ ಕೂಡುಮಂಗಳೂರು ಕೃಷಿ ವಿವಿಧೋದ್ದೇಶದ ಗ್ರಾಮೀಣ ಸಹಕಾರ ಸಂಘದ 2023-28ನೇ ಸಾಲಿನ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರ ಸ್ಥಾನಕ್ಕೆ ಹುದುಗೂರು, ಕಾಳಿದೇವನ ಹೊಸೂರು, ಶಿರಹೊಳಲು ಕ್ಷೇತ್ರದಿಂದ ಆಯ್ಕೆ ಬಯಸಿ ಹೇಮಂತ್ ಕುಮಾರ್ ಹಾಗೂ ಅನಂತ್ ಎಂಬವರು ನಾಮಪತ್ರ ಸಲ್ಲಿಸಿದ್ದರು.

ಅನಂತ್ ಅವರು ನಾಮಪತ್ರ ಹಿಂಪಡೆದ ಹಿನ್ನಲೆಯಲ್ಲಿ ಕೆ.ಕೆ.ಹೇಮಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 13 ನಿರ್ದೇಶಕರ ಸ್ಥಾನಗಳ ಪೈಕಿ ಉಳಿದ 12 ಸ್ಥಾನಗಳಿಗೆ ಅ.12 ರಂದು ಮತದಾನ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!