ಕುಶಾಲನಗರ, ಅ 04:
ಹೆಬ್ಬಾಲೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮೂರನೆಯ ಅವಧಿಗೆ ಅಧ್ಯಕ್ಷರಾಗಿ ಹೆಚ್. ಜೆ. ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಚರಾಜೀನಾಮೆಯಿಂದ ತೆರವಾಗಿದ್ದ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಧಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದ ಸಹಕಾರ ಇಲಾಖೆಯ ಅಧಿಕಾರಿ ವಿಜೇಂದ್ರ ನೂತನ ಅಧ್ಯಕ್ಷರಾಗಿ ಹೆಚ್.ಜೆ. ಸ್ವಾಮಿ ಆಯ್ಕೆಯಾಗಿರುವುದನ್ನು ಘೋಷಣೆ ಮಾಡಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಹೆಚ್.ಆರ್. ಮಣಿಕಂಠ, ನಿರ್ದೇಶಕರಾದ ಹೆಚ್. ಸಿ.ಜಲೇಂದ್ರ, ಹೆಚ್.ಟಿ. ದಿನೇಶ್, ಹೆಚ್.ಕೆ. ಕವಿತಾ, ಎಂ.ಎಂ. ಮಹದೇವ, ಹೆಚ್.ಎನ್. ಮಹದೇವ, ಹೆಚ್.ಟಿ. ಪರಮೇಶ್, ಹೆಚ್.ಟಿ. ಮೋಹನ್, ಹೆಚ್. ಎಲ್. ರವಿಚಂದ್ರ, ಎಂ.ಎಸ್. ಶಶಿಕಲಾ, ಹೆಚ್. ವಿ. ಸೋಮಶೇಖರ್, ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಎನ್. ಗಿರೀಶ್ ಹಾಜರಿದ್ದರು.
Back to top button
error: Content is protected !!