ಕಾರ್ಯಕ್ರಮ

ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ‌ ಒಕ್ಕೂಟ ಜಿಲ್ಲಾ ಸಮಾವೇಶ

ಕುಶಾಲನಗರ, ಸೆ 30: ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ‌ ಒಕ್ಕೂಟ ಜಿಲ್ಲಾ ಸಮಾವೇಶ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಿತು.

ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ನಿವೃತ್ತ ಡೀನ್ ಡಾ. ಸಿ.ಜಿ.ಕುಶಾಲಪ್ಪ ಮಾತನಾಡಿ, ದೇಶವನ್ನು ಮುನ್ನಡೆಸುವ ಯುವ ಶಕ್ತಿಯ ನಿಮಾತೃಗಳು ಶಿಕ್ಷಕರು. ಅತಿ ಹೆಚ್ಚು ಶಿಕ್ಷಕರನ್ನು ಕೊಡುಗೆ ನೀಡುವ ರಾಜ್ಯ ಕರ್ನಾಟಕ. ಕೊಡಗು ಜಿಲ್ಲೆ ವೀರಾ ಸೇನಾನಿಗಳಿಗೆ ಹೆಸರುವಾಸಿಯಾದಂತೆ ರಾಷ್ಟ್ರಮಟ್ಟದ ಪ್ರತಿಭಾವಂತ ಶಿಕ್ಷಕರನ್ನು ಕೂಡ ಜಿಲ್ಲೆ ಕೊಡುಗೆ ನೀಡಿದೆ ಎಂದು ಪ್ರಶಂಶಿಸಿದರು.

ಅಗ್ರಹಾರ, ಮಠಗಳು, ಬಸದಿಗಳಿಂದ ಆರಂಭವಾದ ಶಿಕ್ಷಣ ಪದ್ದತಿ ಇಂದಿನ ಆಧುನಿಕ‌ ಮಟ್ಟಕ್ಕೆ ಬಂದು ತಲುಪಿರುವುದು ಅಮೂಲಾಗ್ರ ಬೆಳವಣಿಗೆ.
ಕೊಡಗಿನ ಖಾಸಗಿ ವಸತಿ ಶಾಲೆಗಳ ಗುಣಮಟ್ಟ ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಆಕರ್ಷಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಶಾಲೆಗಳ ಕೊಡುಗೆ, ಸೇವೆ ಅಪಾರವಿದೆ ಎಂದರು.

ಎಂಎಲ್ಸಿ ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಕೊಡ್ಲಿಪೇಟೆ ಕಿರಿಕೊಡ್ಲಿ‌ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ,
ಅಸೋಸಿಯೇಷನ್ ಅಧ್ಯಕ್ಷ ಕೋಳೇರ ಜರು ಗಣಪತಿ, ಉಪಾಧ್ಯಕ್ಷ ಎಂ.ಟಿ.ದಾಮೋದರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!