ಕುಶಾಲನಗರ ಸೆ 29: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು ತಮಿಳುನಾಡು ಹಾಗೂ ಕರ್ನಾಟಕ ಸರಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ಧಿಕ್ಕಾರ ಕೂಗಲಾಯಿತು.
ಈ ಸಂದರ್ಭ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿ ಹೋರಾಟ ನಡೆಸುವುದು ಎಲ್ಲರ ಕರ್ತವ್ಯ. ರಾಜ್ಯಾದ್ಯಂತ ಕರೆ ನೀಡಿರುವ ಬಂದ್ ಗೆ ಕುಶಾಲನಗರದಲ್ಲಿ ಕೂಡ ಕೆಲವರು ಸ್ವಯಂಪ್ರೇರಿತತವಾಗಿ ಸಹಕಾರ ನೀಡಿರುವುದು ಶ್ಲಾಘನೀಯ ವಿಚಾರ. ಕಾವೇರಿ ಪರ ಹೋರಾಟಕ್ಕೆ ಎಲ್ಲರೂ ಸಂಘಟಿತರಾಗಿ ಹೋರಾಡುವುದು ಅವಶ್ಯಕವಾಗಿದೆ. ರೈತರ ಹೋರಾಟಕ್ಕೆ ಜಯಸಿಗಲು ಬಿಜೆಪಿ ಕಾರ್ಯಕರ್ತರು ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಕಾವೇರಿ ನೀರಿನ ಪಾಲಿನಲ್ಲಿ ರಾಜ್ಯದ ರೈತರಿಗೆ ಮೊದಲ ಆದ್ಯತೆ ದೊರೆಯಬೇಕಿದೆ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅಮೃತ್ ರಾಜ್ ಮಾತನಾಡಿ, ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬರಪೀಡಿತ ಪ್ರದೇಶಗಳು ಹೆಚ್ಚು, ನದಿಗೆ ನೀರಿನ ಮೂಲಗಳು ಕೂಡ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ಆದರೆ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಉಂಟಾಗಿದೆ. ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಇಂದಿನ ಪರಿಸ್ಥಿತಿಗೆ ಕಾರಣ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಕೆ.ಜಿ.ಮನು, ಜೈವರ್ಧನ್, ಕುಮಾರಪ್ಪ, ರೂಪಾ ಉಮಾಶಂಕರ್, ಎಂ.ಎಂ.ಚರಣ್, ನವನೀತ್, ದೇವರಾಜ್, ಮಣಿಕಂಠ, ಪ್ರಶಾಂತ್, ಪ್ರವೀಣ್, ನಾರಾಯಣ್, ಸೋಮಶೇಖರ್, ಚಂದ್ರಶೇಖರ್ ಹೆರೂರು, ಸುಮನ್, ಸದಾಶಿವ, ರಕ್ಷಣಾ ವೇದಿಕೆಯ ಜಗದೀಶ್, ಅಣ್ಣಯ್ಯ ಮತ್ತಿತರರು ಇದ್ದರು.
Back to top button
error: Content is protected !!