ಕಾರ್ಯಕ್ರಮ

‘ಸಿರಿ ಸಂಭ್ರಮ’ ಕವಿಗೋಷ್ಠಿ, ಕೃತಿ ಬಿಡುಗಡೆ ಕಾರ್ಯಕ್ರಮ

ಕುಶಾಲನಗರ ಸೆ 28: ಕರ್ನಾಟಕ ವು ಸುವರ್ಣ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ‌ ಲೇಖಕಿಯರ ಸಂಘದ ವತಿಯಿಂದ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ “ಸಿರಿ ಸಂಭ್ರಮ” ಎಂಬ ಕವಿಗೋಷ್ಠಿ‌ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ
ಹಮ್ಮಿಕೊಳ್ಳಲಾಯಿತು.
ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ.ಅನುರಾಧ ಕುರುಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ‌ ಭಾಷೆಯ ಬಗ್ಗೆ ಹೆಮ್ಮೆ ಪಡುವುದರೊಂದಿಗೆ ಇತರೆ ಭಾಷೆಗಳನ್ನು ಕೂಡ ಗೌರವಿಸುವಂತಾಗಬೇಕು. ಸೃಜನಶೀಲ, ಚಿಂತನಾಶೀಲ ಸಾಹಿತ್ಯಗಳು ಜನರ ಮನಸ್ಸಲ್ಲಿ ಶಾಶ್ವತವಾಗಿ ನೆಲೆ‌ ನಿಲ್ಲುತ್ತದೆ. ಜನಸಂಸ್ಕೃತಿ, ಸಮಾಜಮುಖಿ ವಿಚಾರಗಳು, ಸಮಾಜಕ್ಕೆ ಕೊಡುಗೆ‌ ನೀಡುವಂತಹ ಸಾಹಿತ್ಯದ ಅಗತ್ಯವಿದೆ.
ಹಿರಿಯ ಕವಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಹಿತ್ಯವನ್ನು ಬಳಸಿಕೊಂಡ ಕಾರಣ ಇಂದಿಗೂ ಚಿರಸ್ಥಾಯಿಯಾಗಿದ್ದಾರೆ. ಆದರೆ ಇಂದಿನ ಸಾಹಿತ್ಯ ಕೇವಲ ಹೆಸರು ಗಳಿಸಲು ಮಾತ್ರ ಇರುವಂತೆ ಭಾಸವಾಗುತ್ತಿದೆ ಎಂದರು.

ಕನ್ನಡ‌ ಸಿರಿ ಸ್ನೇಹ‌ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು.

ಸ್ನೇಹ‌ಬಳಗದ ಸದಸ್ಯ, ರೋಟರಿ ಸಂಸ್ಥೆ ಪೂರ್ವಾಧ್ಯಕ್ಷ ಎಂ.ಡಿ.ರಂಗಸ್ವಾಮಿ ಪ್ರಾಸ್ತಾವಿಕವಾಗಿ‌ ಮಾತನಾಡಿದರು.
ಸೋಮವಾರಪೇಟೆಯ ಕವಿಯತ್ರಿ ಶರ್ಮಿಳ ರಮೇಶ್ ರಚಿತ ಕೃತಿಗಳನ್ನು ಕುಶಾಲನಗರದ ಶಿಕ್ಷಕ
ಉ.ರಾ.ನಾಗೇಶ್ ಬಿಡುಗಡೆ‌ ಮಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಕ್ತಿ ದಿನಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್ ವಹಿಸಿದ್ದರು.
ಈ ಸಂದರ್ಭ ಕರ್ನಾಟಕ ಲೇಖಕಿಯರ ಬಳಗದ ಕೊಡಗು ಶಾಖೆ ಅಧ್ಯಕ್ಷೆ ವಿಜಯ ವಿಷ್ಣುಭಟ್,
ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಸಾಹಿತಿಗಳಾದ ಫ್ಯಾನ್ಸಿ ಮುತ್ತಣ್ಣ, ವೈಲೇಶ್, ಉಳುವಂಗಡ ಕಾವೇರಿ, ಕವಿ ನಲ‌ವಿಜಯ ಮತ್ತಿತರರು ಇದ್ದರು.
28 ಕೆಯುಎಸ್ 04 ಚಿತ್ರದಲ್ಲಿ ಕೊಡಗು ಜಿಲ್ಲೆಯ ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ‌ ಲೇಖಕಿಯರ ಸಂಘದ ವತಿಯಿಂದ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ “ಸಿರಿ ಸಂಭ್ರಮ” ಎಂಬ ಕವಿಗೋಷ್ಠಿ‌ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!