ಕ್ರೈಂ

ಕುಶಾಲನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಎರಡೂವರೆ ಲಕ್ಷ ನಗದು ಚೋರಿ

ಕುಶಾಲನಗರ, ‌ನ 28: (ಕುಶಲವಾಣಿ): ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ರೂ ಎರಡೂವರೆ ಲಕ್ಷ ಹಣ ಕಳ್ಳತನ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಕಮರವಳ್ಳಿ ಗ್ರಾಮದ ಸೋಮಶೇಖರ್ ಎಂಬವರು ಸಂಬಂಧಿಕರ ಮದುವೆಗೆ ನೀಡಲೆಂದು ಬ್ಯಾಗಿನಲ್ಲಿ 10 ಲಕ್ಷ ಹಣವನ್ನು ಮೈಸೂರಿನ ಬಿಳಿಕೆರೆಗೆ ಕೊಂಡೊಯ್ಯಲು ಕುಶಾಲನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಬಂದಾಗ ನಿಲ್ದಾಣದಲ್ಲಿ ಬ್ಯಾಗಿಗೆ‌ ಕನ್ನ ಹಾಕಿರುವ ಚೋರರು ಎರಡೂವರೆ ಲಕ್ಷ ಹಣ‌ ಲಪಟಾಯಿಸಿದ್ದಾರೆ. ಉಳಿಕೆ ಏಳೂವರೆ ಲಕ್ಷ ಹಣ ಬ್ಯಾಗಿನಲ್ಲಿ‌ ಬಾಕಿಯಾಗಿದೆ. ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!