ಕುಶಾಲನಗರ,ಸೆ 27: ಕುಶಾಲನಗರದ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ನೃತ್ಯ ತರಬೇತಿ ಕೇಂದ್ರದ ಸಂಯೋಜಕರಾದ ಅಕ್ತರ್ ಅವರು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ದೆಹಲಿಯ ವೋಲ್ಡ್ ವೈಡ್ ಇವೆಂಟ್ ವತಿಯಿಂದ ದೆಹಲಿಯಲ್ಲಿ ನಡೆದ “ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್” ಕಾರ್ಯಕ್ರಮದಲ್ಲಿ ಕುಶಾಲನಗರದ ನೃತ್ಯ ಸಂಯೋಜಕ ಅಕ್ತರ್ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು ೫೦೦ ಕ್ಕೂ ಅಧಿಕ ನೃತ್ಯ ಪಟುಗಳು ಭಾಗವಹಿಸಿದ್ದು, ಅತ್ಯತ್ತಮ ಸಾಧನೆಗೈದ ನೃತ್ಯ ಪಟುಗಳು ಪ್ರಶಸ್ತಿ ಸ್ವೀಕರಿಸಿದ್ದಾರೆ.
ನೃತ್ಯ ಸಂಯೋಜಕ ಅಕ್ತರ್ ಅವರು ಕಳೆದ ಮೂರು ವರ್ಷಗಳಿಂದ ೧೦೦೦ ಕ್ಕೂ ಅಧಿಕ ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡಿದ್ದು, ಹಲವು ಮಕ್ಕಳು ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ಈ ಸಾಧನೆಗೆ ಅಕ್ತರ್ ಅವರ ಕುಟುಂಬಸ್ಥರು, ಸ್ವೇಹಿತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!