ಮನವಿ

ಕೂಡುಮಂಗಳೂರು ಆನೆಕೆರೆ ಅಭಿವೃದ್ಧಿಗೆ ಆಗ್ರಹಿಸಿ ಸಚಿವರಿಗೆ ಮನವಿ

ಕುಶಾಲನಗರ, ಸೆ 25: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಆನೆಕೆರೆ ಅಭಿವೃದ್ಧಿಗೆ ಕ್ರಮವಹಿಸುವಂತೆ ಕೋರಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿ ಮಾಡಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಚಂದ್ರಕಲಾ ಅವರ ಮುಖಾಂತರ

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದ ತಂಡ ಮನವಿ ಸಲ್ಲಿಸಿತು.

ಸಾವಿರಾರು ರೈತರ ಪಾಲಿಗೆ ಆಶಾಕಿರಣವಾಗಿರುವ ಈ ಕೆರೆ ಅಭಿವೃದ್ದಿಯಾದಲ್ಲಿ ಹಲವು ಕಾರಣಗಳಿಂದ ಗ್ರಾಮಸ್ಥರು, ಪ್ರಾಣಿ ಪಕ್ಷಿ ಸಂಕುಲಕ್ಕೆ ಉಪಯೋಗವಾಗಲಿದೆ. ಆದ್ದರಿಂದ ಕೆರೆ ಸುತ್ತಲೂ ಬಂಡ್ ನಿರ್ಮಾಣ ಮಾಡಿ ಆಕರ್ಷಣೀಯವಾಗಿ ಮಾಡಿ ಸಾರ್ವಜನಿಕರ ವಿಹಾರಕ್ಕೆ ಅವಕಾಶ‌ ಮಾಡಿಕೊಡಲು ಕೆರೆ ಸುತ್ತಲೂ ಬಂಡ್ ನಿರ್ಮಾಣ‌ ಮಾಡಿಕೊಡುವಂತೆ ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಫಿಲೋಮಿನಾ, ಮಣಿಕಂಠ, ಗಿರೀಶ್, ಮಂಜು, ಈರಯ್ಯ, ಹರೀಶ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!