ಕುಶಾಲನಗರ, ಆ 12: ಕುಶಾಲನಗರ ತಾಲೂಕಿನ ಹಾರಂಗಿ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆಯಿಂದ ವಿಶ್ವ ಆನೆ ದಿನಾಚರಣೆ ಆಚರಿಸಲಾಯಿತು.
ಶಿಬಿರದ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಬೆಲ್ಲ, ಕಬ್ಬು, ಹಲಸು, ಸಿಹಿಗೆಣಸು, ಬಾಳೆ ದಿಂಡು, ಕುಂಬಳಕಾಯಿ, ಸೌತೆಕಾಯಿ ಮತ್ತಿತರ ಹಣ್ಣುಹಂಪಲುಗಳನ್ನು ತಿನಿಸಲಾಯಿತು.
ದಿನದ ಅಂಗವಾಗಿ ಶಿಬಿರದ ಸಾನೆಗಳಾದ ಕರ್ಣ, ಸುಬ್ರಹ್ಮಣ್ಯ, ರಾಮ, ಈಶ್ವರ, ಲಕ್ಷ್ಮಣ, ವಿಕ್ರಂ, ಏಕದಂತ ಆನೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಶಿಬಿರಕ್ಕೆ ಆಗಮಿಸಿದ್ದ ಪ್ರವಾಸಿಗರು ಮಹಿಳೆಯರು, ಮಕ್ಕಳಾದಿಯಾಗಿ ಸಾಕಾನೆಗಳಿಗೆ ತಿನಿಸು ನೀಡಿ ಸಂಭ್ರಮಿಸಿದರು.
Back to top button
error: Content is protected !!