ಕುಶಾಲನಗರ, ಜು 15: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಚೆಸ್ಕಂ ಕಚೇರಿ ಮುಂಭಾಗದಲ್ಲಿರುವ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಇ ಸ್ಟಾಂಪಿಂಗ್ ಕೇಂದ್ರವನ್ನು ವಿದ್ಯುತ್ ಗುತ್ತಿಗೆದಾರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಸಂತ್ ರೈ ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸಂಘದ ಬೆಳವಣಿಗೆಗೆ ಇ ಸ್ಟಾಂಪಿಂಗ್ ಕೇಂದ್ರ ಆರ್ಥಿಕ ವ್ಯವಸ್ಥೆ ಭದ್ರಗೊಳಿಸುತ್ತದೆ.ಜೊತೆಗೆ ಸಾರ್ವಜನಿಕರಿಗೆ ಹಾಗೂ ಚೆಸ್ಕಂ ಗ್ರಾಹಕರಿಗೆ ಕೇಂದ್ರದಿಂದ ಅನುಕೂಲವಾಗಲಿದೆ.ಸಾರ್ವಜನಿಕ ಕೇಂದ್ರದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಕೆ. ಅನಿಲ್ ,ಕಾರ್ಯದರ್ಶಿ ಎಸ್.ರಾಜ,ಸಹ ಕಾರ್ಯದರ್ಶಿಎಂ.ಆರ್. ಸಂಜೀವ ,ಖಜಾಂಜಿ ಬಿ.ಸಿ.ಸತೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಸುಮೇಶ್,ಕಾರ್ಯದರ್ಶಿ ದಿಲೀಪ್,ಸದಸ್ಯರಾದ ಶಿವಣ್ಣ,ಜಗದೀಶ್ ,ಶ್ರೀನಿವಾಸ,ಅಜಿತ್,ಪ್ರತಾಪ್,ಮಂಜುನಾಥ್ ,ಅರುಣ್ ಉಪಸ್ಥಿತರಿದ್ದರು.
ಚಾಮುಂಡೇಶ್ವರಿ ವಿಶೇಷ ಪೂಜೆ : ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಆಷಾಡ ಮಾಸದ ಕೊನೆಯ ಶುಕ್ರವಾರ ಶ್ರೀ ಚಾಮುಂಡೇಶ್ವರಿ ದೇವಿಯ ವಿಶೇಷ ಪೂಜೆ ನೆರವೇರಿಸಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನಸಂತಾರ್ಪಣೆ ವ್ಯವಸ್ಥೆ ಕಲ್ಪಿಸಿದ್ದರು.
Back to top button
error: Content is protected !!