ಶಿಕ್ಷಣ

ಗುಡ್ಡೆಹೊಸೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡೆಗಳ ವಿತರಣೆ

ಕುಶಾಲನಗರ, ಜು 30: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇಂದು ಯೂತ್ ಪಂಚಾಯತ್ ಸಂಘಟನೆಯ ವತಿಯಿಂದ ಉಚಿತವಾಗಿ ಕೊಡೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಎಸ್. ಸಣ್ಣಸ್ವಾಮಿ ಮಾತನಾಡುತ್ತ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ಸಂಘ ಸಂಸ್ಥೆಗಳು ಉಚಿತವಾಗಿ ಅನೇಕ ಸವಲತ್ತುಗಳನ್ನು ನೀಡುತ್ತಿವೆ, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದು ಹಾಜರಿದ್ದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಹಾಗೂ ಸುತ್ತಮುತ್ತಲಿನ ಶಾಲೆಗಳಿಗೆ ಉಚಿತವಾಗಿ ಸ್ವಚ್ಚತಾ ಪರಿಕರಗಳು ಮತ್ತಿತರ ಸವಲತ್ತುಗಳನ್ನು ನೀಡುತ್ತಿರುವ ಯೂತ್ ಪಂಚಾಯತ್ ಸಂಘಟನೆಯ ಕಾರ್ಯವೈಕರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಂಘಟನೆ ಕಾರ್ಯದರ್ಶಿಗಳಾದ, ರಂಜಿತ್.ಎಂ. ಎಸ್. ಕಿಶೋರ್ ಪೂಜಾರಿ ಮತ್ತು ಬಿಪಿನ್ ರವರು ಸುಮಾರು 84 ವಿಧ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎನ್. ರವಿಕುಮಾರ್ ರವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಯಶುಮತಿ, ರುಕ್ಮಿಣಿ,ಗೀತ,ಮತ್ತು ದೈಹಿಕ ಶಿಕ್ಷಕರಾದ ಚಂದ್ರಶೇಖರ್,ಹಾಗೂ ಪತ್ರಕರ್ತರಾದ ನವೀನ್ ಚಿನ್ನಪ್ಪ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!