ಮನವಿ

ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಟಿಷ್ ರ ಕಾಲದ ಕಬ್ಬಿಣದ ಸೇತುವೆಯ ದುರಸ್ತಿಗೆ ಅಗ್ರಹ, ಪ್ರತಿಭಟನೆಯ ಎಚ್ಚರಿಕೆ

ಕೂಡಿಗೆ, ಫೆ. 4: ಕೂಡಿಗೆ- ಕುಶಾಲನಗರ ಹಾಸನ ಹೆದ್ದಾರಿಯಲ್ಲಿ ಬ್ರಿಟಿಷ್ ರ ಕಾಲದಲ್ಲಿ ಕೂಡಿಗೆಯಲ್ಲಿ ನಿರ್ಮಾಣಗೊಂಡಿರುವ ಕಬ್ಬಿಣದ ಸೇತುವೆಯ ಮೇಲೆ ಮರದ ಗಿಡ ಗಂಟಿಗಳು ಬೆಳೆದುನಿಂತು, ಕಾಡುಮಯವಾಗಿವೆ ಇದನ್ನು ಸಮರ್ಪಕವಾಗಿ ದುರಸ್ತಿ ಪಡಿಸಿ ಬಣ್ಣ ಹೊಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಕೆ.ಪಿ. ರಾಜುರವರ ಅಗ್ರಹವಾಗಿದೆ.
ಕೂಡಿಗೆ- ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಮುಖ ಸಂಪರ್ಕ ಸೇತುವೆಯಾಗಿದ್ದು ಬ್ರಿಟಿಷ್ ರ ಕಾಲದಲ್ಲಿ ನಿರ್ಮಾಣಗೊಂಡಿರುವ ಕಬ್ಬಿಣದ ಸೇತುವೆಯನ್ನು ದುರಸ್ತಿ ಪಡಿಸಿದರೆ ಸಾರ್ವಜನಿಕರು ,ಶಾಲಾ ವಿದ್ಯಾರ್ಥಿಗಳ ತಿರುಗಾಟಕ್ಕೆ ಅನುಕೂಲವಾಗುವುದು,ಅಲ್ಲದೆ ಕುಡಿಯುವ ನೀರು ಸರಬರಾಜು ಮಾಡುವ ಗುತ್ತಿಗೆದಾರರು ಮನಬಂದಂತೆ ಬೃಹತ್ ಗಾತ್ರದ ಪೈಪ್ ಲೈನ್ ಅಳವಡಿಕೆ ಮಾಡುವ ಸಂಧರ್ಭದಲ್ಲಿ ಮನಬಂದಂತೆ ಅಳವಡಿಕೆ ಮಾಡಿರುತ್ತಾರೆ ಸಂಬಂಧಿಸಿದ ಇಲಾಖೆಯವರಿಗೆ ತಿಳಿಸಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲಾ ಮುಂದಿನ ದಿನಗಳಲ್ಲಿ ಸರಿಪಡಿಸದಿದ್ದರೆ ಸಂಬಂಧಿಸಿದ ಇಲಾಖೆಯ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಪಿ.ರಾಜು ರವರ ಸಂಘಟನೆ ನೇತ್ರತ್ವದ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!