ಕುಶಾಲನಗರ, ಜೂ 12: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿಯಲ್ಲಿ ನೂತನ ಕುಲಪತಿ ಪ್ರೊ.ಅಶೋಕ ಸಂ.ಆಲೂರು ಅವರಿಗೆ ಅಭಿನಂದನೆ ಮತ್ತು ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕ್ಯಾಂಪಸ್ ನ ವಿಜ್ಞಾನ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಹಾಸನ ವಿವಿಯ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ ಉದ್ಘಾಟಿಸಿದರು. ಕೊಡಗು ವಿವಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುವಂತಾಗಲಿ ಎಂದು ಶುಭ ಹಾರೈಸಿದರು. ಎಲ್ಲರ ಸಂಘಟನಾತ್ಮಕ ಸಹಕಾರದಿಂದ ಮಾತ್ರ ಒಂದು ಸಂಸ್ಥೆ ಅಭಿವೃದ್ಧಿ ಕಾಣಲು ಸಾಧ್ಯ. ನೂತನ ಕುಲಪತಿಗಳ ವಿವಿಧ ಕ್ಷೇತ್ರಗಳಲ್ಲಿನ ಅನುಭವ ಕೊಡಗು ವಿವಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ವಿವಿ ಕುಲಪತಿ ಪ್ರೊ.ಅಶೋಕ ಸಂ.ಆಲೂರು ಮಾತನಾಡಿದರು.
ಈ ಸಂದರ್ಭ ಚಾಮರಾಜನಗರ ವಿವಿ ಕುಲಪತಿ ಎಂ.ಆರ್.ಗಂಗಾಧರ್, ಕೊಡಗು ವಿವಿ ಕುಲಸಚಿವ ಡಾ.ಸೀನಪ್ಪ, ಜೀವರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಎಸ್.ಚಂದ್ರಶೇಖರಯ್ಯ, ಪ್ರೊ. ಕೆ.ಕೆ.ಧರ್ಮಪ್ಪ, ಪ್ರೊ.ಮಹದೇವಪ್ರಸಾದ್ ಮತ್ತಿತರರು ಇದ್ದರು.
Back to top button
error: Content is protected !!