ಪ್ರಕಟಣೆ

ಸುಂದರನಗರ: ರಸ್ತೆ‌ ಮೇಲೆ ಜಗುಲಿ‌ ನಿರ್ಮಾಣ: ಸಂಚಾರಕ್ಕೆ ಅಡ್ಡಿ ಆರೋಪ

ಮಾಜಿ‌ ಜನಪ್ರತಿನಿಧಿಯಿಂದ ಸ್ಥಳೀಯರಿಗೆ ಕಿರುಕುಳ ಆರೋಪ

ಕುಶಾಲನಗರ, ಜು 30: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿ ರಸ್ತೆ ಅತಿಕ್ರಮಿಸಿಕೊಂಡು ಸ್ಥಳೀಯರಿಗೆ ತೀವ್ರ ಅನಾನುಕೂಲ ಉಂಟುಮಾಡಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಪಂ‌ ಮಾಜಿ ಮಹಿಳಾ ಜನಪ್ರತಿನಿಧಿ ತಮ್ಮ ಮನೆ‌ ಮುಂಭಾಗದ ರಸ್ತೆ ಮೇಲೆ ಜಗುಲಿ‌ ನಿರ್ಮಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದರೊಂದಿಗೆ ಪಾತ್ರೆ ಪಗಡೆ ಬಟ್ಟೆ ತೊಳೆಯುವ ಮೂಲಕ‌ ಇತರರು ಈ‌ ಮಾರ್ಗದಲ್ಲಿ ನಡೆದಾಡಲು ಅಡ್ಡಿಯುಂಟು ಮಾಡುತ್ತಿದ್ದಾರೆ.
ಈ ಬಗ್ಗೆ ತಾಪಂ‌ ಇಒ ಒಳಗೊಂಡಂತೆ ಗ್ರಾಪಂ ಗೆ ಹಲವು ಬಾರಿ‌ ಮನವಿ‌ ಮಾಡಿದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಗ್ರಾಪಂ ಆಡಳಿತ ಕೂಡಲೆ ಈ ಸಮಸ್ಯೆ ಪರಿಶೀಲಿಸಿ ಬಗೆಹರಿಸಬೇಕಿದೆ. ಇಲ್ಲದಿದ್ದಲ್ಲಿ‌ ಗ್ರಾಪಂ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮಸ್ಯೆಗೆ ಒಳಗಾದ ಲೋಹಿತ್, ಮಂಜುನಾಥ್, ಬಣ್ಣಾರಿ ರಾಜ, ರವಿ, ಕಾಳಿಮುತ್ತು, ಪುನಿತ್, ಜಾನಿ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!