ಟ್ರೆಂಡಿಂಗ್

ಮೆಕಾನಿಕ್ ವೃತ್ತಿ‌ ಬಗ್ಗೆ ನಿಂದನೆ, ಕಾನೂನು‌ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಕುಶಾಲನಗರ: ಮೇ 01: ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಮೆಕಾನಿಕ್ ವೃತ್ತಿಯ ಬಗ್ಗೆ ಕೀಳಾಗಿ ನಿಂದಿಸಿ ಅಪಮಾನಿಸಲಾಗಿದೆ ಎಂದು ಆರೋಪಿಸಿ ಕುಶಾಲನಗರ ವರ್ಕ್ ಶಾಪ್ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಕುಶಾಲನಗರ ಗಣಪತಿ ದೇವಾಲಯ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಖಾಸಗಿ ಚಾನಲ್, ನಿರೂಪಕರು, ತೀರ್ಪುಗಾರರು ಹಾಗೂ ಸ್ಪರ್ಧಿಯ ವಿರುದ್ದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಮೆರವಣಿಗೆ‌ ಮೂಲಕ ಡಿವೈಎಸ್ಪಿ ಕಛೇರಿಗೆ ತೆರಳಿ ಅಲ್ಲಿಯೂ ಕೆಲಕಾಲ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಲಾಯಿತು.

ಮೆಕಾನಿಕ್ ವೃತ್ತಿ ನಿರ್ವಹಿಸುವ ಶ್ರಮಿಕ ವರ್ಗದವರನ್ನು ಗ್ರೀಸ್ ತಿಂದು ಬದುಕುವವರು ಎಂದು ನಿಂದಿಸಿರುವವರ ವಿರುದ್ದ ಸೂಕ್ತ ಕ್ರಮವಹಿಸಿವಂತೆ ಆಗ್ರಹಿಸಿ ಡಿವೈಎಸ್ಪಿ ಗಂಗಾಧರಪ್ಪ ಅವರಿಗೆ ಮನವಿ‌ ಸಲ್ಲಿಸಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಪೂವಯ್ಯ, ರಾಜ್ಯಾದ್ಯಂತ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮೆಕಾನಿಕ್ ಗಳನ್ನು ಕೀಳಾಗಿ ಬಿಂಬಿಸಿ ಅಪಮಾನಿಸಲಾಗಿದೆ. ಗ್ರೀಸ್ ತಿಂದು ಬದುಕುವವರು ಎಂದು ನಿಂದಿಸಿರುವ ಸ್ಪರ್ಧಿ ಹಾಗೂ ಇದಕ್ಕೆ ಪ್ರೋತ್ಸಾಹಿಸಿದ ತೀರ್ಪುಗಾರರು, ನಿರೂಪಕರು ಹಾಗೂ ವಾಹಿನಿ ಮುಖ್ಯಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕ್ಷಮೆಯಾಚನೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಸಿ.ಗಣೇಶ್, ಕಾರ್ಯದರ್ಶಿ ಶಿವು, ಸಹ ಕಾರ್ಯದರ್ಶಿ ಬಾಬಣ್ಣ, ಖಜಾಂಚಿ ರಂಜಿತ್, ಪ್ರಮುಖರಾದ ಗಣೇಶ್, ಮದನ್, ವಿನ್ಸೆಂಟ್, ರವಿ, ಶಮಿ, ಸತೀಶ್, ರಾಜಣ್ಣ, ಭರತ್, ವೆಂಕಟೇಶ್, ಚಂದ್ರು, ಬಾಬಿ, ವಾಸು, ರಫೀಕ್, ಯತೀಶ್, ಸುಹೇಬ್, ಜಹೀರ್, ಗಿರಿ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!