ಶಿಕ್ಷಣ

ನೇರುಗಳಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಕುಶಾಲನಗರ, ಜು 02: ಸೋಮವಾರಪೇಟೆ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತ್ ಚುನಾವಣೆಯನ್ನು ನಡೆಸಲಾಯಿತು.ಒಟ್ಟು ಈ ಪ್ರಕ್ರಿಯೆಯಲ್ಲಿ 16 ವಿದ್ಯಾರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.ನಾಮಪತ್ರವನ್ನು ಯಾರು ಕೂಡ ವಾಪಸ್ಸು ತೆಗೆದುಕೊಂಡಿರಲಿಲ್ಲ.16 ವಿದ್ಯಾರ್ಥಿಗಳು ಕೂಡ ಅಂತಿಮ ಕಣದಲ್ಲಿದ್ದು ಇಂದು ಚುನಾವಣೆಯನ್ನು ನಡೆಸಲಾಗಿ 8 ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಯಿತು.ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಈ ಕೆಳಕಂಡಂತಿದೆ.ಸವಿತಾ ಕೆ ಕೆ,ಕುಷಿ,ವಿಜಯ್,ನಿಶ್ವಿತ ಎ ಯು,ಪ್ರಾರ್ಥನಾ ಲೋಬೊ,ಪೃಥ್ವಿ ಎ ಆರ್,ಸುಬ್ರಹ್ಮಣ್ಯ ಎಮ್ ಎಸ್,ಸಿಂಚನಾ ಎನ್ ಎಮ್ ಇವರು ನಾಯಕರುಗಳಾಗಿ ಚುನಾವಣೆಯ ಮೂಲಕ ಆಯ್ಕೆಯಾದರು.ಅಂತಿಮವಾಗಿ ಇವರುಗಳೆಲ್ಲರೂ ಕೂಡ ಕುಮಾರಿ ಸವಿತಾ ಕೆ ಕೆ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರು.ಇನ್ನೂಳಿದ ಖಾತೆಗಳನ್ನು ಮುಖ್ಯಮಂತ್ರಿಗಳು ಹಂಚಿಕೆ ಮಾಡಿದರು.ಇ ಎಲ್ ಸಿ ಕ್ಲಬ್ ನ ಸಂಚಾಲಕರಾದ ಕುಮಾರಿ ಆಶಾ ಸಿ ಜೆ ಅವರು ಸಂಸತ್ ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಿಕೊಟ್ಟಿದ್ದಲ್ಲದೆ.ಗೆದ್ದಂತಹ ಶಾಲಾ ಸಂಸತ್ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ್ದು ವಿಶೇಷವಾಗಿತ್ತು.ಈ ಕಾರ್ಯಕ್ರಮವನ್ನು ಕುರಿತು ಮುಖ್ಯಶಿಕ್ಷಕರಾದ ಶ್ರೀಮತಿ ರಾಜೇಶ್ವರಿಯವರು ವಿದ್ಯಾರ್ಥಿ ದೆಸೆಯಿಂದೆಲೆ ಈ ರೀತಿಯ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಭಾರತದ ಚುನಾವಣೆ ಪ್ರಕ್ರಿಯೆ ಹಂತಗಳ ಪರಿಚಯವಾಗುವುದಲ್ಲದೆ,ಉತ್ತಮ ನಾಯಕರುಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನವನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆಯೆಂದು ಕಿವಿಮಾತು ಹೇಳಿದರು.ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಆಧಾರ್ ಕಾಡ್೯ಗಳೊಂದಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ,ಮೊಬೈಲ್ ವೋಟಿಂಗ್ ಮಿಷನ್ ಅಲ್ಲಿ ಮತದಾನ ಮಾಡಿ ಸಂತಸಪಟ್ಟಿದ್ದು ಕಂಡುಬಂದಿತು.ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಶ್ರೀ ರತ್ನಕುಮಾರ್ ಕೆ ಆರ್,ಹಿರಿಯ ಶಿಕ್ಷಕರಾದ ಉಮೇಶ್ ಹೆಚ್ ಕೆ,ರತೀಶ್ ಹೆಚ್ ಎನ್ ,ಲಿಖಿತ ಬಿ ಆರ್, ಭಾನುಮತಿ ಎ ಎಸ್,ಹಾಗೂ ಮತದಾರರ ಕ್ಲಬ್ ನ ಸಂಚಾಲಕರಾದ ಕುಮಾರಿ ಆಶಾ ಸಿ ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರಾದ ರುತೇಶ್ ಹೆಚ್ ಎನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!