ಕಾರ್ಯಕ್ರಮ

ಕುಶಾಲನಗರ ಗುಂಡುರಾವ್ ಬಡಾವಣೆ ರಸ್ತೆ 42.5 ಲಕ್ಷ ವೆಚ್ಚದಲ್ಲಿ ಅಭಿವೃದ್ದಿ

ಕುಶಾಲನಗರ, ಫೆ 21: ಕುಶಾಲನಗರದ ಗುಂಡುರಾವ್ ಬಡಾವಣೆಯ ರಸ್ತೆ ಅಭಿವೃದ್ಧಿ ಕಾರ್ಯ‌ ಪ್ರಗತಿಯಲ್ಲಿದೆ.

ಐಡಿಎಸ್ಎಂಟಿ ಯೋಜನೆಗೆ ಒಳಪಡುವ ಈ ರಸ್ತೆಯನ್ನು ಶಾಸಕ ಅಪ್ಪಚ್ಚುರಂಜನ್ ಅವರ ಸೂಚನೆ ಮೇರೆಗೆ ಪುರಸಭೆ ವತಿಯಿಂದ ರೂ 42.5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಹಲವು ದಶಕಗಳಿಂದ ಅಭಿವೃದ್ಧಿ ಕಾಣದ ಈ ರಸ್ತೆ ಅವ್ಯವಸ್ಥೆಗೆ ಇದೀಗ ಮುಕ್ತಿ‌ ಕಾಣಿತ್ತಿರುವ ಹಿನ್ನಲೆಯಲ್ಲಿ ಈ ಭಾಗದ ನಿವಾಸಿಗಳು ಸಹಜವಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

400 ಮೀಟರ್ ಉದ್ದಕ್ಕೆ 5.3 ಮೀ ಅಗಲದ ಈ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗುತ್ತಿದೆ.

ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಸದಸ್ಯ ಎಂ.ಕೆ.ದಿನೇಶ್, ಅಭಿಯಂತರ ರಂಗರಾಮ್ ಕಾಮಗಾರಿ ಪರಿಶೀಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!