ಕುಶಾಲನಗರ, ಫೆ 16: ಕುಶಾಲನಗರ ಪುರಸಭೆ ವತಿಯಿಂದ ರೂ 15 ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ರಾಜ್ಯ ಹೆದ್ದಾರಿಯಿಂದ ಐಬಿ ವರೆಗೆ ಸಂಪರ್ಕ ಕಲ್ಪಿಸುವ 300 ಮೀ ಉದ್ದದ ರಸ್ತೆಯ ಎರಡೂ ಬದಿ ಕಾಂಕ್ರೀಟಿಕರಣಗೊಳಿಸಿ ರಸ್ತೆ ಅಗಲೀಕರಣಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪಟ್ಟಣದ ಜನನಿಬಿಡವಾದ ಈ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗಾಗಿ 45 ಅಡಿ ಅಗಲದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಾಮಗಾರಿಗಳನ್ನು ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಸದಸ್ಯ ಬಿ.ಅಮೃತ್‌ರಾಜ್ ಪರಿಶೀಲನೆ ನಡೆಸಿ ದರು.
Back to top button
error: Content is protected !!