ಕಾರ್ಯಕ್ರಮ

ಕುಶಾಲನಗರದ ರಿಜಿಡ್ ಗ್ರೂಪ್‌ ನಿರ್ಮಿತ ಗಡಿಯಾರ ಸ್ಥಂಭ‌ ಲೋಕಾರ್ಪಣೆ

ಕುಶಾಲನಗರ, ಫೆ 11: ಕುಶಾಲನಗರದ ರಿಜಿಡ್ ಗ್ರೂಪ್ ವತಿಯಿಂದ ಜನತಾ ಕಾಲನಿಯಲ್ಲಿ ನಿರ್ಮಿಸಿರುವ ಗಡಿಯಾರ ಸ್ಥಂಭ ಉದ್ಘಾಟನಾ ಸಮಾರಂಭ ನಡೆಯಿತು.
ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಗಡಿಯಾರ ಕಂಬ‌ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಸಂಘಸಂಸ್ಥೆಗಳು ಜನಮಾನಸದಲ್ಲಿ, ಸಮಾಜದಲ್ಲಿ ಗಟ್ಟಿಯಾಗಿ ಉಳಿಯುವಂತಹ ಸಾಮಾಜಿಕ ಕಾರ್ಯಕ್ರಮಗಳು, ಚಟುವಟಿಕೆಗಳು ಹಾಗೂ ಸೇವೆ ಒದಗಿಸುವಲ್ಲಿ‌ ಮುಂದಾಗಬೇಕಿದೆ. ಸೇವಾ ಚಟುವಟಿಕೆಗಳ ಬಗ್ಗೆ ದೃಢವಾದ ಸಂಕಲ್ಪ ಹೊಂದಿದಾಗ ಮಾತ್ರ ಅದು ಸಾಕಾರಗೊಳ್ಳಲು ಸಾಧ್ಯ ಎಂದ ಅವರು, ಈ ನಿಟ್ಟಿನಲ್ಲಿ ರಿಜಿಡ್ ಗ್ರೂಪ್ ಸದಸ್ಯರು ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು. ಮುಂಬರುವ ಚುನಾವಣೆಯಲ್ಲಿ
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನದಲ್ಲಿ ತೊಡಗಿ ತಮ್ಮ ಜವಾಬ್ದಾರಿ ತೋರುವಂತೆ ಅವರು ಕರೆ ನೀಡಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜಮ್ ಮಾತನಾಡಿ, ಸಮಾಜಕ್ಕೆ‌ ಕೊಡುಗೆ ನೀಡುವ ತುಡಿತ ಎಲ್ಲರಲ್ಲೂ ಮೂಡಿದಾಗ ಉತ್ತಮ‌ ಸಮಾಜ ನಿರ್ಮಾಣ ಸಾಧ್ಯ. ಉತ್ತಮ ಸಮಾಜ, ಸ್ವಸ್ಥ, ಅಪಾರಧ‌ ಮುಕ್ತ ಸಮಾಜ‌ ನಿರ್ಮಾಣಕ್ಕೆ ಪ್ರತಿಯೊಬ್ಬ ಸಾರ್ವಜನಿಕನ ಸಹಕಾರ ಅತ್ಯಗತ್ಯ ಎಂದ ಅವರು, ಪೊಲೀಸರೊಂದಿಗೆ ಸಾರ್ವಜನಿಕರು ಕೂಡ ಅಗತ್ಯ ಸಹಕಾರ ನೀಡಬೇಕಿದೆ. ಸುರಕ್ಷಿತ ಸಂಚಾರಕ್ಕೆ ಅಗತ್ಯವಾದ ಉತ್ತಮ‌ ಸಲಹೆ, ಸೂಚನೆಗಳನ್ನು ನೀಡಿದಲ್ಲಿ ಅಂತಹವುಗಳ ಅನುಷ್ಠಾನಕ್ಕೆ ಇಲಾಖೆ ಮುಂದಾಗಲಿದೆ ಎಂದರು.

ರಿಜಿಡ್ ಗ್ರೂಪ್ ಅಧ್ಯಕ್ಷ ಕೆ.ಎಸ್.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಸುರಯ್ಯಭಾನು, ಸದಸ್ಯ ಎಂ.ಬಿ.ಸುರೇಶ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್, ಕಾರ್ಯಕ್ರಮ ನಿರ್ದೇಶಕ ಕೆ.ಎನ್.ನಾಗಪ್ರವೀಣ್, ಜಿ. ರಾಘವೇಂದ್ರ, ನಗರ ಬಿಜೆಪಿ ಅಧ್ಯಕ್ಷ ವಿ.ಎನ್.ಉಮಾಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಪ್ರಮುಖರಾದ ಜಿ.ಎಲ್.ನಾಗರಾಜ್, ಬಿ.ಎಲ್.ಸತ್ಯನಾರಾಯಣ, ಸದಸ್ಯರಾದ ಎನ್.ವಿ.ಬಾಬು, ಎ.ಎಸ್.ಕುಮಾರ್, ವಿ.ಆರ್.ಮಂಜುನಾಥ್, ಎಸ್.ಎಸ್.ಮನೋಹರ್, ಎಸ್.ಎಂ.ನಾಗೇಂದ್ರ, ಬಿ.ಎನ್.ರಾಘವೇಂದ್ರ, ಪಿ.ಕೆ.ರಘು, ಎ.ವಿ.ಸಂತೋಷ್, ಪಿ.ಜಿ.ಶ್ರೀನಿವಾಸ್, ವಿ.ಆರ್.ಶ್ರೀನಿವಾಸ್, ವಿ.ವಿ.ತಿಲಕ್, ಚಿತ್ರ ರಮೇಶ್, ಪ್ರತಿಮ ರಾಘವೇಂದ್ರ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!