ಕುಶಾಲನಗರ, ಫೆ 02 : ಜೀವಕೋಟಿಗಳ ಸಲಹುವ ಜೀವನದಿ ಕಾವೇರಿ ನದಿಯ ಸಂರಕ್ಷಣೆ ನಾಡಿನ ಪ್ರತಿಯೊಂದು ಜನಸಮುದಾಯದ ಹೊಣೆಯಾಗುವ ಮೂಲಕ ಗಂಗಾಜಲವನ್ನು ಪೂಜ್ಯನೀಯವಾಗಿಸಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಕುಶಾಲನಗರದ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಸ್ಥಳೀಯ ವೀರಶೈವ ಸಮಾಜದ ಸಹಯೋಗದೊಂದಿಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಕಾವೇರಿ ಆರತಿ ಕ್ಷೇತ್ರದಲ್ಲಿ ಹುಣ್ಣಿಮೆಯ ಅಂಗವಾಗಿ ನಡೆದ 182 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವರ ಸೃಷ್ಟಿಯಾಗಿರುವ ಕಾವೇರಿ ಜೀವ ಜಲಕ್ಕೆ ಮಾನವನ ಹಸ್ತಕ್ಷೇಪ ಇಲ್ಲದೇ ಹೋದಲ್ಲಿ ನದಿಯ ಅಸ್ತಿತ್ವವು ಉಳಿಯುತ್ತದೆ. ಹಾಗೂ ಸ್ವಚ್ಛಂದವಾಗಿ ಹರಿಯಲು ಸಾಧ್ಯ ಎಂದ ಶ್ರೀಗಳು, ನಿರಂತರ ಆರಾಧನೆ ಮೂಲಕ ನದಿ ಪರಿಸರದ ಸಂರಕ್ಷಣೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ಕುಶಾಲನಗರದಲ್ಲಿ ಹರಿದಿರುವ ಕಾವೇರಿ ನದಿಯ ಪರಿಸರ ಇಂದು ಒಂದಷ್ಟು ಸ್ವಚ್ಚಂದವಾಗಿ ಇದೆ ಎಂದಾದರೆ ಅದು ಸಾಮಾಜಿಕ ಚಿಂತನೆಯ ನದಿ ಉಳಿವಿನ ಹೋರಾಟಗಾರ ಚಂದ್ರಮೋಹನ್ ಅವರ ಶ್ರಮದ ಫಲ. ನದಿಗೆ ಯಾರೂ ಕೂಡ ತ್ಯಾಜ್ಯ ಬಿಸಾಡದಂತೆ ಸ್ವಚ್ಛಂದವಾಗಿ ಹರಿಯಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಕರೆ ಕೊಟ್ಟರು.
ನದಿ ಸ್ವಚ್ಚತಾ ಆಂದೋಲನದ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ನದಿಯ ದಂಡೆಗೆ ಕಾಲಿಡದಷ್ಟು ಕೊಳಚೆಯಾಗಿದ್ದ ನದಿ ಕಟ ಪರಿಸರ ಸ್ವಚ್ಛತೆಗೆ ಕಳೆದ ಎರಡು ದಶಕಗಳಿಂದಲೂ ನಿರಂತರ ಶ್ರಮ ವಹಿಸಿ ಒಂದಷ್ಟು ಸ್ವಚ್ಛತೆ ಹಾಗೂ ಪೂಜ್ಯತಾ ಭಾವನೆ ಮೂಡಿಸುವಲ್ಲಿ ಯಶಸ್ಸು ಕಂಡಿದ್ದೇವೆ. ಬೊಗಸೆಯಿಂದ ಕುಡಿಯಲು ಯೋಗ್ಯ ವಾಗಿದ್ದ ಕಾವೇರಿ ನೀರು ಇಂದು ಕಲುಷಿತ ಗೊಳ್ಳದಂತೆ ಎಲ್ಲರ ಸಹಕಾರ ಅಗತ್ಯ ಎಂದರು.
ಹಿರಿಯ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಅಷ್ಟೋತ್ತರ ಕುಂಕುಮಾರ್ಚನೆ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.
ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಶಾಂಬಶಿವಯ್ಯ, ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್,
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕರಾದ ನಾಗರಾಜ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ,
ಕುಶಾಲನಗರ ತಾಲ್ಲೂಕು ಮಹಾಸಭಾ ಅಧ್ಯಕ್ಷ ಹೆಚ್.ಎಂ.ಮಧುಸೂದನ್, ಕಾರ್ಯದರ್ಶಿ ಶುಭಶೇಖರ್, ಕುಶಾಲನಗರ ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಮಾಜಿ ಅಧ್ಯಕ್ಷೆ ವಿಜಯಪಾಲಾಕ್ಷ,
ಸರೋಜಾ ಆರಾಧ್ಯ, ಡಾ.ದೀಪಿಕಾ, ವೇದಾವತಿ,
ನಿವೃತ್ತ ಪ್ರಾಂಶುಪಾಲ ಕೆಂಚಪ್ಪ, ಉಪನ್ಯಾಸಕ ಪರಮೇಶ್, ಗಣೇಶ್, ವಿರೂಪಾಕ್ಷ, ಹೇಮಲತಾ ಮತ್ತಿತರರಿದ್ದರು.
Back to top button
error: Content is protected !!