ಕುಶಾಲನಗರ, ಅ 20:ಸಾಲಮಾಡಿಕೊಂಡು ಖಿನ್ನೆತೆಗೊಳಗಾಗಿದ್ದ ಸೈನಿಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗರ ಶರಣಾಗಿರುವ ಘಟನೆ ಹುಣಸೂರು ನಗರದ ಕೆ.ಎಸ್.ಆರ್.ಟಿ.ಸಿ.ಡಿಪೋ ಹಿಂಬಾಗದ ಹೊಸ ಬಡಾವಣೆಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ನಂಜಾಪುರದ ಮಂಜುನಾಥ ಶೆಟ್ಟಿಯವರ ಪುತ್ರ ಭೂ ಸೇನೆಯ ಬೆಂಗಳೂರಿನ ಆರ್.ಟಿ.ನಗರದ ಪ್ಯಾರಾಚೂಟ್ ರೆಜಮೆಂಟ್‌ನ ಸೈನಿಕ ಎಂ.ಚಂದ್ರಶೇಖರ್(35)ಸಾವನ್ನಪ್ಪಿದವರು.
ಇವರಿಗೆ ತಂದೆ,ತಾಯಿ, ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಸೈನಿಕ ಎಂ.ಚಂದ್ರಶೇಖರ್ ಕೆ.ಎಸ್.ಆರ್.ಟಿ.ಸಿ. ಡಿಪೋ ಹಿಂಬಾಗದ ಹೊಸ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಆ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದರು.ರಾತ್ರಿ ಪತ್ನಿ ಮಕ್ಕಳು ಮನೆಯ ಹೊರಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತಂದೆ ಮಂಜುನಾಥಶೆಟ್ಟಿ ದೂರು ನೀಡಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್.ಐ.ಜಮೀರ್ ಅಹಮದ್ ತಿಳಿಸಿದ್ದಾರೆ.
ತಿಂಗಳ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸ್ ತೆರಳಬೇಕಿತ್ತು. ಭಾನುವಾರ ಶವ ಪರೀಕ್ಷೆ ನಂತರ ಸ್ವಗ್ರಾಮ ನಂಜಾಪುರದಲ್ಲಿ ಅಂತ್ಯಕ್ರಿಯೆ ನಡೆಯಿತು.
ಈತ ಕಳೆದ 15ವರ್ಷಗಳಿಂದ ಜಮ್ಮುಕಾಶ್ಮೀರ, ಆಗ್ರಾ, ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ತಾವು ಆತನೊಂದಿಗೆ ಕಾರ್ಯ ನಿರ್ವಹಿಸಿದ್ದು, ಉತ್ತಮ ಹೆಸರು ಪಡೆದಿದ್ದ ಈತನ ಸಾವು ನೋವು ತಂದಿದೆ ಎಂದು ಸಹೊದ್ಯೋಗಿ ಸೈನಿಕ ಚಂದ್ರಶೇಖರ್ ಹಾಗೂ ಮಹಮದ್ ಬೇಗ್ ತಿಳಿಸಿದರು.
Back to top button
error: Content is protected !!