ಕುಶಾಲನಗರ, ಜ 08: ಕೂಡಿಗೆ ಗ್ರಾಪಂ ಸದಸ್ಯ ಅರುಣ್ ರಾವ್ ಅವರ ಮೇಲೆ ಹಲ್ಲೆ ನಡೆದಿದೆ. ಕೂಡಿಗೆ ಗ್ರಾಪಂ ಅಧ್ಯಕ್ಷೆ ಮಂಗಳಾ ಅವರ ಪತಿ ಪ್ರಕಾಶ್ ಅವರು ಭಾನುವಾರ ಸಂಜೆ ಕೂಡಿಗೆ ಡೇರಿ ಬಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಹಲ್ಲೆಗೊಳಗಾದ ಅರುಣ್ ರಾವ್ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ.
ಕೂಡಿಗೆ ಗ್ರಾಪಂ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಅರುಣ್ ರಾವ್ ಮತ್ತಿತರರು ಸಭಾ ತ್ಯಾಗ ನಡೆಸಿದ್ದರು. ಈ ಪ್ರಕರಣ ಹಲವು ತಿರುವುಗಳು ಪಡೆದುಕೊಳ್ಳುತ್ತಿದ್ದು ತೀರಾ ವೈಯಕ್ತಿಕ ವೈಷಮ್ಯಕ್ಕೆ ತಿರುಗಿದೆ. ಮಂಗಳಾ ಪ್ರಕಾಶ್ ಅವರು ಸಭಾ ತ್ಯಾಗ ಮಾಡಿದ ಸದಸ್ಯರ ಮೇಲೆ ದೂರು ದಾಖಲಿಸಿದ್ದು ಇದರ ಬೆನ್ನಲ್ಲೇ ಈ ರೀತಿಯ ಹಲ್ಲೆ ಪ್ರಕರಣ ನಡೆದಿದೆ. ಅರುಣ್ ರಾವ್ ಅವರಿಗೆ ಜಾತಿನಿಂದನೆ ಕೂಡ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಅರುಣ್ ರಾವ್ ಅವರ ಎದೆಗೆ ತೀವ್ರ ಪೆಟ್ಟಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ರವಾನಿಸಲಾಗಿದೆ.
ಮತ್ತೊಂದೆಡೆ ಗ್ರಾಪಂ ಅಧ್ಯಕ್ಷೆ ಮಂಗಳಾ ಅವರ ಪತಿ ಪ್ರಕಾಶ್ ಅವರು ಕೂಡ ಸದಸ್ಯ ಅರುಣ್ ರಾವ್ ನನ್ನ ಮಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.