ಕುಶಾಲನಗರ, ಆ 25: The Environment (Protection) Act, 1986 and Noise Pollution (Regulation and Control) Rules-2000 ರ ಅನ್ವಯ ನಿಗಧಿಪಡಿಸಿರುವ ಡೆಸಿಬಲ್ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ ಸಿಸ್ಟಂ ಉಪಕರಣಗಳನ್ನು ಬಳಸದಂತೆ ಸೂಚನೆಗಳನ್ನು ನೀಡಲಾಗಿದ್ದರೂ ಸಹ ಕೊಡಗು ಜಿಲ್ಲೆಯಲ್ಲಿ ನಡೆಯುವ ಗಣೇಶ ಹಬ್ಬ ಹಾಗೂ ದಸರಾ ಹಬ್ಬಗಳ ಆಚರಣೆಯಲ್ಲಿ ಹೆಚ್ಚಿನ ಡೆಸಿಬಲ್ ಸೌಂಡ್ ಸಿಸ್ಟಂ ಉಪಕರಣಗಳನ್ನು ಬಳಸುತ್ತಿರುವುದರಿಂದ ಕೊಡಗು ಜಿಲ್ಲಾಡಳಿತ ಮತ್ತು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರನ್ನು 06 ನೇ ಪ್ರತಿವಾದಿಯಾಗಿ ಮಾಡಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಕರ್ನಾಟಕದ ಉಚ್ಚ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ನಡೆಸಿ ಈ ಮೇಲಿನ ಕಾಯ್ದೆ ಮತ್ತು ನಿಯಮಗಳಲ್ಲಿ ಸೂಚಿಸಿರುವಂತೆ ಕಾನೂನು ಪಾಲನೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾಡಳಿತ ಮತ್ತು ಕೊಡಗು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಸಂಸ್ಥೆಗೆ ನ್ಯಾಯಾಲಯವು ಸೂಚನೆಗಳನ್ನು ನೀಡಲಾಗಿರುತ್ತದೆ.
ಆದ್ದರಿಂದ ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಕರ್ನಾಟಕದ ಉಚ್ಚ ನ್ಯಾಯಾಲಯದ The Environment (Protection) Act, 1986 and Noise Pollution (Regulation and Control) Rules-2000 ರಲ್ಲಿ ನಿಗಧಿಪಡಿಸಿರುವ ಡೆಸಿಬಲ್ ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ಸ್ ಹೊರ ಬರುವ ಯಾವುದೇ ರೀತಿಯ ಸೌಂಡ್ಸ್ ಸಿಸ್ಟಂ ಉಪಕರಣಗಳನ್ನು ಬಳಸದಂತೆ ಕೋರಿದೆ.
Back to top button
error: Content is protected !!