ಕ್ರೈಂ

ಪತ್ತೆಯಾಗದ ಇಬ್ಬರು ಆರೋಪಿಗಳು: ಬಯಲಾಗದ ನಿಗೂಡ ಸಾವಿನ ರಹಸ್ಯ

ಕುಶಾಲನಗರ, ಅ 17: ನಂಜರಾಯಪಟ್ಟಣ ಗ್ರಾಪಂ ವಿರೂಪಾಕ್ಷಪುರದ ಆಟೋ ಚಾಲಕ ವಿನೋದ್ ನಿಗೂಢವಾಗಿ ಮೃತಪಟ್ಟು ವಾರ ಕಳೆದಿದೆ. ಅನುಮಾನಾಸ್ಪದ ರೀತಿಯಲ್ಲಿ‌ ನದಿಯಲ್ಲಿ ವಿನೋದನ ಮೃತದೇಹ ಪತ್ತೆಯಾಗಿ 5 ದಿನಗಳಾದರೂ ಸಾವಿನ ರಹಸ್ಯ ಪತ್ತೆಯಾಗಿಲ್ಲ. ಈತನೊಂದಿಗೆ ಬೇಟೆಗೆ ತೆರಳಿದ್ದ ಮೂವರ‌ ಪೈಕಿ ಈಶ್ವರ, ಯೋಗೇಶ್ ತಲೆಮರೆಸಿಕೊಂಡಿದ್ದು ಇದುವರೆಗೆ ಪತ್ತೆಯಾಗಿಲ್ಲ. ಮತ್ತೋರ್ವ ಧರ್ಮ ಪೋಲೀಸ್ ವಶಕ್ಕೆ ಪಡೆದರೂ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂಬುದು‌ ಪೊಲೀಸರ ಹೇಳಿಕೆ. ನೀರಿನಲ್ಲಿ‌ ಮುಳುಗಿ ಸಾವನಪ್ಪಿರುವ ಶಂಕೆ ವ್ಯಕ್ತಗೊಂಡಿದ್ದು ಮರಣೋತ್ತರ ಪರೀಕ್ಷೆಯಿಂದ ಸತ್ಯ ಬಯಲಾಗಬೇಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!